ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿ ಯೋಜನೆಯ ಭಾಗವಾಗಿ, ದೇವಸ್ಥಾನದ ಮುಖ್ಯರಸ್ತೆ ಪಕ್ಕದಲ್ಲಿರುವ ಕಂಬಳದ ಒಂದು ಕರೆಯನ್ನು ಎಡಬದಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಭಾನುವಾರ ಈ ಸ್ಥಳಾಂತರದ ಕುರಿತು ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.
2027 ರ ಕಂಬಳ ನೂತನ ಕರೆಯಲ್ಲಿ:
ದೇವಸ್ಥಾನದ ಪ್ರಗತಿಗೆ ಪೂರಕವಾಗಿ ಕರೆಯನ್ನು ಸ್ಥಳಾಂತರಿಸಲು ಸೂಚಿಸಲಾಗಿದ್ದು, ಈ ಸಂಬಂಧ ಕಂಬಳ ಸಮಿತಿಯು ಸಿದ್ಧತೆ ಆರಂಭಿಸಿದೆ. ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರು ಮಾತನಾಡಿ, “ನೂತನ ಕರೆಯನ್ನು ಸಿದ್ಧಪಡಿಸಲು ಕನಿಷ್ಠ ಆರು ತಿಂಗಳು ಬೇಕಾಗಬಹುದು. ಆದ್ದರಿಂದ, ೨೦೨೭ನೇ ಸಾಲಿನ ಕಂಬಳವನ್ನು ಹೊಸದಾಗಿ ನಿರ್ಮಿಸಿದ ಕರೆಯಲ್ಲಿ ನಡೆಸಲಾಗುವುದು” ಎಂದು ಸ್ಪಷ್ಟಪಡಿಸಿದರು.
ಸ್ಥಳ ಪರಿಶೀಲನೆಯಲ್ಲಿ ಉಪಸ್ಥಿತರಿದ್ದವರು:
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಕುಮಾರ್ ಸುವರ್ಣ, ಮ್ಯಾನೇಜರ್ ಹರೀಶ್, ಕಂಬಳದ ಪ್ರಧಾನ ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ, ಕಂಬಳ ಕರೆ ನಿರ್ಮಾಣ ಪರಿಣತರಾದ ಅಪ್ಪು ಯಾನೆ ಜೋನ್ ಸಿರಿಲ್ ಡಿಸೋಜ, ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಹಾಗೂ ಸದಸ್ಯರಾದ ವಿಕ್ರಂ ಶೆಟ್ಟಿ ಅಂತರ ಕೋಡಿಂಬಾಡಿ ಮತ್ತು ಜತಿನ್ ನಾಕ್ ಕಂಪ ಮತ್ತಿತರರು ಹಾಜರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









