ಬಂಟ್ವಾಳ : ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಚೆನ್ನಕೇಶವ(37) ಎಂಬುವವರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಇವರು ಮೊಡಾಂಕಾಪುವಿನಲ್ಲಿರುವ 7 ಸ್ಪೈಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಅ.25ರಂದು ಚೆನ್ನಕೇಶವ ಅವರು ಎಂದಿನಂತೆ ಕೆಲಸಕ್ಕೆ ಹೋಗಿ, ಮಸಾಲೆ ಪದಾರ್ಥಗಳ ಲೈನ್ ಸೇಲ್ಸ್ ಮುಗಿಸಿ, ಮಧ್ಯಾಹ್ನ 2.30 ಗಂಟೆಗೆ ಚಾಲಕ ಹರಿದಾಸ್ ಅವರ ವಾಹನದಿಂದ ಪಂಪುವೆಲ್ನಲ್ಲಿ ಇಳಿದು ಬೇರೆ ಕೆಲಸ ಮುಗಿಸಿ ಕಂಪೆನಿಗೆ ಬರುವುದಾಗಿ ತಿಳಿಸಿದ್ದರು. ಆದರೆ, ಅವರು ಕಂಪೆನಿಗೆ ಮರಳಿಲ್ಲ.
ನಂತರ ಮಧ್ಯಾಹ್ನ 3.30 ಗಂಟೆಗೆ ಚನ್ನಕೇಶವ ಅವರು ದೂರುದಾರರ ಅತ್ತಿಗೆಗೆ ಕರೆ ಮಾಡಿ, ತಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಮೊಬೈಲ್ನಲ್ಲಿ ಚಾರ್ಜ್ ಇಲ್ಲದ ಕಾರಣ ಸ್ವಿಚ್ ಆಫ್ ಆಗುತ್ತದೆ, ನಾಲ್ಕು ದಿನ ಬಿಟ್ಟು ಕರೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಆ ದಿನಾಂಕದಿಂದ ಈವರೆಗೆ ಅವರು ಯಾವುದೇ ಕರೆ ಮಾಡಿಲ್ಲ ಅಥವಾ ಮನೆಗೆ ಮರಳಿಲ್ಲ. ಸಂಬಂಧಿಕರ ಮನೆಗೂ ಅಥವಾ ಕಂಪೆನಿಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಣೆಯಾದ ವ್ಯಕ್ತಿ ಚೆನ್ನಕೇಶವ @ ಕೇಶವ ಅವರ ಸುಳಿವು ಸಿಕ್ಕಲ್ಲಿ, ದಯವಿಟ್ಟು 9535971261 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ, ಪೊಲೀಸರಿಗೆ ಸಹಕರಿಸಲು ಕೋರಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









