
ಮಂಗಳೂರು : ಶ್ರೀ ಮಂಗಳಾದೇವಿ ಅಯ್ಯಪ್ಪ ಭಕ್ತ ವೃಂದದ ವತಿಯಿಂದ 54ನೇ ವರ್ಷದ ಶಬರಿಮಲೆ ಯಾತ್ರೆಯ ಅಂಗವಾಗಿ 43ನೇ ವರ್ಷದ ಮಂಡಲಪೂಜೆಯ ಭಜನಾ ಮಹೋತ್ಸವವು ದಿನಾಂಕ 27.12.2025 ಶನಿವಾರ ಬಹಳ ವಿಜೃಂಭಣೆಯಿಂದ ನೆರವೇರಿತು.
ಸೂರ್ಯಾಸ್ತ ಸಂಜೆ 6.02ಕ್ಕೆ ಸರಿಯಾಗಿ ಶ್ರೀ ನಾಗರಾಜ್ ಹಾಗೂ ರೇಖಾ ನಾಗರಾಜ್ ದಂಪತಿಗಳು ನಂದಾದೀಪವನ್ನು ಬೆಳಗಿಸಿದರು. ಗುರುಪುರ ವಜ್ರದೇಹಿ ಮಠದ ಯತಿಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಸಂಕೀರ್ತನೆಯೊಂದಿಗೆ ಭಜನಾ ಮಹೋತ್ಸವವನ್ನು ಆರಂಭಿಸಿದರು.
ರಾತ್ರಿ 8.00 ಗಂಟೆಗೆ ಮಂಡಲಪೂಜೆಯ ವಿಶೇಷ ಪೂಜೆಯು ನಡೆಯಿತು. ಬಳಿಕ ಮರುದಿನ ಸೂರ್ಯೋದಯದವರೆಗೆ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಯಿತು. ವಿವಿಧ ಭಜನಾ ತಂಡಗಳು ಸಂಕೀರ್ತನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಕ್ತಿಮಯ ವಾತಾವರಣವನ್ನು ನಿರ್ಮಿಸಿದರು ಈ ಸಂದರ್ಭ ಪ್ರತಿ ಎರಡು ಗಂಟೆಗಳಿಗೆ ಒಮ್ಮೆ ಜಾಮ ಪೂಜೆ ನೆರವೇರಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಮಾಜಿ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಸಾಸ್ ಸಂಸ್ಥೆಯ ಮುಖ್ಯಸ್ಥರು, ವಿವಿಧ ವೃಂದಗಳ ಅಯ್ಯಪ್ಪ ಮಾಲಾಧಾರಿಗಳು ಉಪಸ್ಥಿತರಿದ್ದರು. ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ಹಾಗೂ ಶ್ರೀ ಹರೀಶ್ ಐತಾಳ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರೀ ಮಾಧವ ಗುರುಸ್ವಾಮಿಗಳ ನೇತೃತ್ವದಲ್ಲಿ, ಶ್ರೀ ಇನಿತ್ ಗುರುಸ್ವಾಮಿ ಮತ್ತು ಶ್ರೀ ಮನೋಜ್ ಗುರುಸ್ವಾಮಿಗಳ ಸಹಕಾರದೊಂದಿಗೆ ಸಕಾಲದಲ್ಲಿ ನೆರವೇರಿದವು.
ಮುಂದಿನ ಕಾರ್ಯಕ್ರಮವಾಗಿ ದಿನಾಂಕ 11.01.2026ರಂದು ಬೆಳಿಗ್ಗೆ 8.30ರಿಂದ 54ನೇ ಶಬರಿಮಲೆ ಯಾತ್ರೆಯ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ನೆರವೇರಲಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









