ಜೆರುಸಲೇಂ : ಮಧ್ಯ ಇಸ್ರೇಲ್ನ ಬೆಟ್ ಶೆಮೇಶ್ ನಗರದ ಮೇಲೆ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಅಧಿಕೃತವಾಗಿ ತಿಳಿಸಿದೆ. ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ತುರ್ತು ಸೇವೆಯ ವರದಿಯ ಪ್ರಕಾರ, ಈ ದಾಳಿಯಲ್ಲಿ 23 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕ್ಷಿಪಣಿಗಳು ಜನನಿಬಿಡ ಕಟ್ಟಡಗಳಿಗೆ ನೇರವಾಗಿ ಅಪ್ಪಳಿಸಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಸ್ಥಳದಲ್ಲಿ ಪೊಲೀಸರು ಮತ್ತು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇತ್ತೀಚೆಗೆ ನಡೆದ ಇಸ್ರೇಲ್ ಮತ್ತು ಅಮೆರಿಕದ ಜಂಟಿ ಏರ್ಸ್ಟ್ರೈಕ್ಗೆ ಪ್ರತಿಯಾಗಿ ಇರಾನ್ ಈ ಭೀಕರ ಪ್ರತಿದಾಳಿ ಆರಂಭಿಸಿದೆ.
ಇಸ್ರೇಲ್ ಮೇಲೆ ಮಾತ್ರವಲ್ಲದೆ, ಇರಾನ್ ಈಗ ಗಲ್ಫ್ ರಾಷ್ಟ್ರಗಳ ಮೇಲೂ ಸಮರ ಸಾರಿದೆ. ಇಸ್ರೇಲ್ ಗುರಿಯಾಗಿಸಿ 200ಕ್ಕೂ ಹೆಚ್ಚು ಮಿಸೈಲ್ಗಳು ಮತ್ತು 12ಕ್ಕೂ ಹೆಚ್ಚು ಡ್ರೋನ್ಗಳನ್ನು ಉಡಾಯಿಸಿರುವ ಇರಾನ್, ಅದರ ಜೊತೆಗೇ ಖತಾರ್, ಸೌದಿ ಅರೇಬಿಯಾ, ದುಬೈ, ಸಿರಿಯಾ ಮತ್ತು ಯುಎಇ ರಾಷ್ಟ್ರಗಳ ಮೇಲೆಯೂ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವಿದೇಶ ಸುದ್ದಿಗಳು, ಸುದ್ದಿಗಳು









