ಮಂಗಳೂರು : ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ನಡೆಯುವ [ ಮಾರ್ಚ್ ತಿಂಗಳ 2026] ಎರಡು ವಾರಗಳ ಕಾಲ ಜರುಗಿದ ಯೋಗ ಶಿಬಿರ ಸಮರೋಪಗೊಂಡಿತು. ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ನಿಯಮಿತ ಯೋಗಾಭ್ಯಾಸವು ದೀರ್ಘಕಾಲದ ಒತ್ತಡವನ್ನು ಕಡಿಮೆ ಮಾಡುವ ಮೂಲಕ, ಉರಿಯೂತವನ್ನು ಕಡಿಮೆ ಮಾಡುವ ಮೂಲಕ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ ಸಹಾಯ ಮಾಡುವ ಮೂಲಕ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆಸನಗಳು, ಉಸಿರಾಟದ ತಂತ್ರಗಳು (ಪ್ರಾಣಾಯಾಮ) ಮತ್ತು ಧ್ಯಾನವನ್ನು ಸೇರಿಸುವುದರಿಂದ ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುತ್ತದೆ. ಯೋಗವು ಕೇವಲ ಒಂದು ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿಡುವ ಒಂದು ಸಮಗ್ರ ಜೀವನ ಪದ್ಧತಿಯಾಗಿದೆ ಎಂದು ತಿಳಿಸಿದರು.
ಶ್ರೀ ದೇಲಂಪಾಡಿ ಶಿಷ್ಯರಾದ ಸುಮಾ ಹಾಗೂ ಚಂದ್ರಹಾಸ ಬಾಳ ಇವರು ಸಹಕರಿಸಿದರು. ಯೋಗ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಶಿಬಿರಾರ್ಥಿಗಳು ಗೌರವಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









