ನಿಮ್ಮ ಪ್ರೀತಿಪಾತ್ರರು ಮರಳಿ ನಿಮ್ಮಂತೆ ಬರುವ ಮಾರ್ಗ

Sunday, May 3rd, 2020
Arasina Kunkuma

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪೂರ್ಣಪ್ರಮಾಣದ ಜೀವನವು ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣವಾಗುವುದು ಎಂಬ ಭಾವನೆ ಮೂಡುವುದು ಸಾಮಾನ್ಯ. ಆದರೆ ಕೆಲವೊಂದು ಅನಿರೀಕ್ಷಿತವಾದಂತಹ ಘಟನೆಗಳಿಂದ, ಮನಸ್ತಾಪದಿಂದ ಅವರು ನಿಮ್ಮಿಂದ ದೂರ ಹೋಗಬಹುದಾಗಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಬಳಿ ಇದ್ದಾಗ ಅವರ ಬೆಲೆ ನಿಮಗೆ ಗೊತ್ತಾಗಲಾರದು ಅವರು ನಿಮ್ಮಿಂದ ದೂರ ಸರಿದಂತೆ ಅವರ ಅವಶ್ಯಕತೆ ನಿಮಗೆ ಅರಿವಿಗೆ ಬರುತ್ತದೆ. ಜೊತೆಗೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇಲ್ಲದ ಅನುಭವ ಮತ್ತು ಯಾತನೆ ತಿಳಿದುಬರುತ್ತದೆ […]

ಟಿವಿ ವರದಿಗಾರನ ಪಾಸಿಟಿವ್ ವರದಿ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೊರೊನಾ ಪರೀಕ್ಷೆ

Thursday, April 30th, 2020
Sajith babu

ಕಾಸರಗೋಡು : ಜಿಲ್ಲೆಯ ಪತ್ರಕರ್ತನೋರ್ವನಲ್ಲಿ ಸೋಂಕು ಪತ್ತೆಯಾದ ಹಿನ್ನಲೆ ಕಾಸರಗೋಡು ಜಿಲ್ಲಾಧಿಕಾರಿ ಡಿ. ಸಜಿತ್ ಬಾಬು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿ ಡಿ. ಸಜಿತ್ ಬಾಬು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ವರದಿ ಕೈ ಸೇರಿದೆ. ಪತ್ರಕರ್ತನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ವ ಕ್ವಾರಂಟೈನ್ ಗೆ ಒಳಗಾಗಿದ್ದರು. ಬುಧವಾರ ತಮ್ಮ ಗಂಟಲ ದ್ರವ ಪರೀಕ್ಷೆಗೆ ರವಾನಿಸಿದ್ದರು. ಇಂದು ಸಂಜೆ ಪರೀಕ್ಷಾ ವರದಿ ಕೈ ಸೇರಿದೆ. ಅಧಿಕಾರಿಯೊಬ್ಬರ ವರದಿಯ ನಿರೀಕ್ಷೆ ಯಲ್ಲಿ ಕಾಸರಗೋಡು ಜನರು ಆತಂಕ ಗೊಂಡಿದ್ದರು. ಗುರುವಾರ ದ ವೇಳೆಗೆ, ರಾಜ್ಯದಲ್ಲಿ […]

ದಿನಭವಿಷ್ಯ : ಮೀನ ರಾಶಿ-ಕುಟುಂಬಸ್ಥರ ನೆರವಿನಿಂದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗುವಿರಿ

Thursday, April 30th, 2020
guru raghavendra

ಶ್ರೀ ಗುರು ರಾಯರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಕಾರ್ಯಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ವೃತ್ತಿ ಬದಲಾವಣೆಯ ಚಿಂತನೆ ನಿಮ್ಮಲ್ಲಿ ಬರಲಿದೆ. ಸೂಕ್ತ ಕಾಲವನ್ನು ನೋಡಿಕೊಂಡು ಹೊಸ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಒಳಿತು. ನಿಮ್ಮ ಪರಿಶ್ರಮದ ಕೆಲಸದಿಂದ ಉತ್ತಮ ಆದಾಯ ಗಳಿಕೆ ಕಂಡುಬರುತ್ತದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ […]

ಕೋಳಿ ಫೀಡ್ ಲಾರಿಗೆ ಬೆಂಕಿ, ಚಾಲಕ ಮತ್ತು ನಿರ್ವಾಹಕರಿಗೆ ಗಂಭೀರ ಗಾಯ

Wednesday, April 29th, 2020
koli-feed

ಬಂಟ್ವಾಳ: ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಕೋಳಿ ಫೀಡ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ ತಾಗಿ ಢಿಕ್ಕಿಯಾದ ಘಟನೆ ಬಂಟ್ವಾಳದ  ನಡೆದಿದೆ. ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರಿಗೂ ಗಾಯಗಳಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿನಿ ಲಾರಿಯಲ್ಲಿ ಮಂಗಳವಾರ  ಬೆಳಗ್ಗೆ ಕಂದೂರಿನಿಂದ ಫೀಡ್ ಪ್ರಾಡಕ್ಟ್ ತುಂಬಿಸಿಕೊಂಡು ಹೋಗುವ ವೇಳೆ ಈ ಘಟನೆ ನಡೆದಿದ್ದು, ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ. ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ, ನಂತರ ಮನೆಯೊಂದರ ಕಂಪೌಂಡ್ ಗೋಡೆಗೆ ಢಿಕ್ಕಿ […]

ಏಪ್ರಿಲ್ 28 ಆದಿ ಶಂಕರಾಚಾರ್ಯರ ಜಯಂತಿ; ಪಾಲಘರ ಸಂತರ ಹತ್ಯೆಗೆ ನ್ಯಾಯ ಸಿಗುವುದೇ

Monday, April 27th, 2020
Shankaracharya

ಮಂಗಳವಾರ  : ಹಿಂದೂ ಧರ್ಮದ ಪುನರುತ್ಥಾನದ ಜನಕರಾಗಿರುವ ಆದಿ ಶಂಕರಾಚಾರ್ಯರ ಜಯಂತಿಯು ಎಪ್ರಿಲ್ 28 ರಂದು ಇದೆ. ಮಹಾರಾಷ್ಟ್ರದ ಪಾಲಘರದಲ್ಲಿ ಉದ್ರಿಕ್ತ ಗುಂಪು ಎಪ್ರಿಲ್ 19 ರಂದು ರಾತ್ರಿ ಪೂ. ಕಲ್ಪವೃಕ್ಷ ಗಿರಿಜೀ ಮಹಾರಾಜ ಹಾಗೂ ಪೂ. ಸುಶೀಲ ಗಿರಿಜೀ ಮಹಾರಾಜ ಈ ಇಬ್ಬರು ಸಂತರೊಂದಿಗೆ ಅವರ ವಾಹನ ಚಾಲಕರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿತು. ಈ ಸಂತರು ಆದಿ ಶಂಕರಾಚಾರ್ಯರು ನಿರ್ಮಿಸಿದ ಆಖಾಡಾ ಪರಂಪರೆಯವರಾಗಿದ್ದರು. ಸಂತರ ಚರಣಗಳಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲು ‘ಆದಿ ಶಂಕರಾಚಾರ್ಯರ ಜಯಂತಿ’ ಇದು ಎಲ್ಲಕ್ಕಿಂತ ಯೋಗ್ಯವಾದ […]

ಮಂಗಳೂರು : ಸಂಸದ ನಳಿನ್‌ಕುಮಾರ್‌ ರಿಂದ 20 ಸಾವಿರ ಕಿಟ್ ವಿತರಣೆ

Sunday, April 26th, 2020
Nalin-Kit

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ 20 ಸಾವಿರ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಭಾನುವಾರ ನಗರದ ಕದ್ರಿ ಮೈದಾನದಲ್ಲಿ ಬಿಜೆಪಿ ಶಾಸಕರು ಹಾಗೂ ಮಂಡಲ ಸಮಿತಿ ಅಧ್ಯಕ್ಷರುಗಳಿಗೆ ಹಸ್ತಾಂತರಿಸಲಾಯಿತು. ಕಿಟ್ ಹಸ್ತಾಂತರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ “ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಬಡ ಜನತೆಯ ನೆರವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ೨೦ ಸಾವಿರ ಕಿಟ್ ನೀಡಲಾಗಿದ್ದು, ಶಾಸಕರು ಹಾಗೂ […]

ಕೋವಿಡ್ ರಾಜಕೀಯ : ಸಾಂಕ್ರಾಮಿಕ ರೋಗದ ಬಗ್ಗೆ ವೈದ್ಯನಾಗಿ ನನಗೆ ತಿಳಿದಿದೆ- ಶಾಸಕ ಭರತ್‌ ಶೆಟ್ಟಿ

Saturday, April 25th, 2020
bharath-shetty

ಮಂಗಳೂರು : ಕೋವಿಡ್ ಸೋಂಕಿತರನ್ನು ಚಿತೆಯಲ್ಲಿ ದಹಿಸುವುದರಿಂದ ಸೋಂಕು ಹರಡುವುದಿಲ್ಲ. ಈ ಬಗ್ಗೆ ವೈದ್ಯನಾಗಿ ಮಾಹಿತಿ ತಿಳಿದುಕೊಂಡಿದ್ದೇನೆ. ತಜ್ಞರೂ ಹೇಳಿದ್ದಾರೆ. ಹೀಗಾಗಿ ನಾನು ವಿರೋಧ ವ್ಯಕ್ತಪಡಿಸಿಲ್ಲ. ವೈದ್ಯನಾಗಿ ಆ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಸೋಂಕಿತರ ಅಂತ್ಯಸಂಸ್ಕಾರದಿಂದ ಪರಿಸರದಲ್ಲಿ ಕಾನೂನು ತೊಡಕು ಉಂಟಾಗಬಾರದೆಂಬ ಕಾರಣಕ್ಕೆ ಅವರನ್ನು ಸಮಧಾನಿಸಿ ಸೂಕ್ತ ಮಾಹಿತಿ ನೀಡಲು ಸ್ಥಳಕ್ಕೆ ಹೋಗಿದ್ದೇನೆಯೇ ಹೊರತು ಅಂತ್ಯಸಂಸ್ಕಾರವನ್ನು ತಡೆಯಲು ಅಲ್ಲ ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದ್ದಾರೆ. ವೃದ್ಧೆಯ ಅಂತ್ಯಸಂಸ್ಕಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ […]

ಬಜರಂಗದಳದ ಮಾಜಿ ಮುಖಂಡ, “ನಮ್ಮ ಧ್ವನಿ” ಸಂಘಟನೆ ಸಂಸ್ಥಾಪಕ ಮಹೇಂದ್ರ ಕುಮಾರ್ ನಿಧನ

Saturday, April 25th, 2020
Mahendra Kumar

ಮಂಗಳೂರು  : ಬಜರಂಗದಳದ ಮಾಜಿ ಮುಖಂಡ, ಖ್ಯಾತ ಸಾಮಾಜಿಕ ಕಾರ್ಯಕರ್ತ, ಪ್ರಖರ ವಾಗ್ಮಿ ಮಹೇಂದ್ರ ಕುಮಾರ್ (47) ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಹೇಂದ್ರ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಇವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಹೇಂದ್ರ ಕುಮಾರ್ ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾಗಿದ್ದು, ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇವರು […]

ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮಂಗಳೂರು ಆಸ್ಪತ್ರೆಯಲ್ಲಿ ಸಾವು

Tuesday, April 21st, 2020
vidya

ಮಂಗಳೂರು :  ಬಾಳುಗೋಡು ಗ್ರಾಮದ ಉಪ್ಪುಕಳದ ನಿವಾಸಿ ವಿದ್ಯಾ (20) ಬಂದ್ಯಡ್ಕ ಅವರು ಮಂಗಳವಾರ  ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಂಗಳೂರಿನಲ್ಲಿ ನರ್ಸಿಂಗ್‌ ಮಾಡುತ್ತಿದ್ದ ಯುವತಿ ಇತ್ತೀಚೆಗೆ ಊರಿಗೆ ಬಂದಿದ್ದು ಮೂರು ದಿನದ ಹಿಂದೆ ಮನೆಯಲ್ಲಿ ವಿಷ ಸೇವಿಸಿದ್ದರು. ಅಸ್ವಸ್ಥಗೊಂಡ ಆಕೆಯನ್ನು ಮನೆಯವರು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಮಂಗಳವಾರ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಮೃತರು ಉಪ್ಪುಕಳದ ವೆಂಕಟ್ರಮಣ ಅವರ ಪುತ್ರಿಯಾಗಿದ್ದು ತಾಯಿ, ಸಹೋದರರನ್ನು ಅಗಲಿದ್ದಾರೆ.

ದಿನ ಭವಿಷ್ಯ : ವೃಷಭ ರಾಶಿ – ಉದ್ಯೋಗದಲ್ಲಿ ಕೆಲವು ಅಡತಡೆಗಳು ಹೆಚ್ಚಾಗಬಹುದು

Monday, April 20th, 2020
ManjunatahSwamy

ಶ್ರೀ ಮಂಜುನಾಥೇಶ್ವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದುರ್ಬಲ ಮನಸ್ಥಿತಿಯನ್ನು ತೆಗೆದುಹಾಕಿ. ಕೆಲಸದಲ್ಲಿ ಪರಿಪಕ್ವತೆಯನ್ನು ಸಾಧಿಸಲು ಪ್ರಯತ್ನಿಸಿ. ಸಾಲದ ವ್ಯಾಪಾರ ನಿಮಗೆ ಬಾದೆ ಕೊಡಬಹುದು. ಕುಟುಂಬಿಕ ಚಿಂತೆ ಹೆಚ್ಚಾಗಲಿದೆ. ಸಂಗಾತಿಯ ನಿರ್ಧಾರಗಳನ್ನು ಅವಲಂಬಿಸುವುದು ಸೂಕ್ತ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಬಲಿಷ್ಟ ಆರ್ಥಿಕ ವ್ಯವಸ್ಥೆಯನ್ನು […]