ಸೌದೆಯಲ್ಲೇ ಅಡುಗೆ, ಡಿಸಿ ಕಚೇರಿ ಎದುರೇ ಸಿಲಿಂಡರ್ : ಮಹಿಳಾ ಕಾಂಗ್ರೆಸ್‌ನಿಂದ ವಿನೂತನ ಪ್ರತಿಭಟನೆ

Wednesday, February 19th, 2020
mahila-congress

ಮಡಿಕೇರಿ : ಅಡುಗೆ ಅನಿಲದ ಸಹವಾಸ ಬೇಡವೆಂದು ಸೌದೆಯಲ್ಲೇ ಅಡುಗೆ ಮಾಡಿದರು, ಖಾಲಿ ಸಿಲಿಂಡರ್ ಗಳನ್ನು ಜಿಲ್ಲಾಡಳಿತದ ಭವನಕ್ಕೆ ತಂದರು. ಕೇಂದ್ರ ಸರ್ಕಾರದ ವಿರುದ್ಧ ಮಹಿಳೆಯರು ಘೋಷಣೆಗಳನ್ನು ಕೂಗಿದರು. ಹೀಗೆ, ಅಡುಗೆ ಅನಿಲದ ಬೆಲೆಯನ್ನು ದುಬಾರಿ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳಾ ಕಾರ್ಯಕರ್ತರು ಸೌದೆ ಒಲೆಯಲ್ಲಿ ಕಾಫಿ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು […]

ಕಂಬಳ ವೀರ ಶ್ರೀನಿವಾಸ ಗೌಡರ ದಾಖಲೆ ಮುರಿದ ಮತ್ತೋರ್ವ ಕಂಬಳ ವೀರ ನಿಶಾಂತ್​ ಶೆಟ್ಟಿ

Tuesday, February 18th, 2020
nishanth

ಮಂಗಳೂರು : ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಹಿಂದಿಕ್ಕುವ ಮೂಲಕ ಜಾನಪದ ಕ್ರೀಡೆ ಕಂಬಳ ಪಟು ಶ್ರೀನಿವಾಸ ಗೌಡ ಹೊಸ ಸಾಧನೆ ಮಾಡಿದ್ದರು. ಅಚ್ಚರಿ ಎಂದರೆ, ಈಗ ಶ್ರೀನಿವಾಸ್ ಗೌಡ ಅವರ ದಾಖಲೆಯನ್ನೇ ಮತ್ತೋರ್ವ ಕಂಬಳ ಸ್ಪರ್ಧಿ ಮುರಿಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಸಾಧನೆ ಮಾಡಿದ ಯುವಕ. ವೇಣೂರಿನ ಪೆರ್ಮುಡ ಕಂಬಳದಲ್ಲಿ ನಿಶಾಂತ್ ಈ ಸಾಧನೆ ಮಾಡಿದ್ದಾರೆ. 143 ಮೀಟರ್‌ ದೂರವನ್ನು ನಿಶಾಂತ್ ಕೇವಲ 13.61 […]

ಕಂಬಳ ವೀರ ಶ್ರೀನಿವಾಸ್‌ ಗೌಡ ರವರಿಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಸನ್ಮಾನ

Tuesday, February 18th, 2020
Kambala-jockey

ಬೆಂಗಳೂರು : ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಶ್ರೀನಿವಾಸ್‌ ಗೌಡ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನ ಮಾಡಿದ್ದಾರೆ. ಈ ಸಂದರ್ಭ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆಯ ವತಿಯಿಂದ ಶ್ರೀನಿವಾಸ ಗೌಡ ಅವರಿಗೆ ರೂ. 3 ಲಕ್ಷ ಮೊತ್ತದ ಚೆಕ್ […]

ಮಂಗಳೂರು ವಿಶ್ವವಿದ್ಯಾ ಸಂವಾದದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Monday, February 17th, 2020
VVV

ಮಂಗಳೂರು : ಸಮಸ್ತ ಭಾರತೀಯ ವಿದ್ಯೆ- ಕಲೆಗಳ ಸಂರಕ್ಷಣೆ- ಸಂವರ್ಧನೆ- ಸಂಶೋಧನೆ ಮತ್ತು ಸಂಯೋಜನೆಯ ಮೂಲಕ ದೇಶಭಕ್ತ, ಧರ್ಮನಿಷ್ಠ, ಸಂಸ್ಕೃತಿ ಪ್ರೇಮಿ, ವಿಶ್ವಹಿತೈಷಿ ಸತ್ಪ್ರಜೆಗಳ ನಿರ್ಮಾಣದ ಮಹದುದ್ದೇಶದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸಲಾಗುತ್ತಿದೆ. ಇದು ಇತರ ವಿಶ್ವವಿದ್ಯಾಲಯಗಳಂತಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ದರ ಭಾರತೀ ಸ್ವಾಮೀಜಿ ಹೇಳಿದರು. ಮಂಗಳೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತ ಬೃಹತ್ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು. ಸಾಮಾನ್ಯ ವಿಶ್ವವಿದ್ಯಾಲಯಗಳು […]

ವಂಶದ ಹಿತಾಸಕ್ತಿ ಮತ್ತು ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಇದು ಇಂದಿನ ವಿಪರ್ಯಾಸ : ಸಚಿವ ಸಿ.ಟಿ.ರವಿ

Saturday, February 15th, 2020
ct-ravi

ಮೈಸೂರು : ಮಹಾರಾಜರ ಕಾಲದಲ್ಲಿ ವಂಶಪಾರಂಪರ್ಯ ಅಧಿಕಾರ ಇದ್ದರೂ ಕೂಡ ವಂಶದ ಹಿತಾಸಕ್ತಿಗಾಗಿ ಕೆಲಸ ಮಾಡದ ರಾಜಪ್ರಭುತ್ವ. ಈಗ ಪ್ರಜಾಪ್ರಭುತ್ವದ ಒಳಗೇನೇ ವಂಶದ ಹಿತಾಸಕ್ತಿ ಮತ್ತು ವಂಶದ ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಇದು ಇಂದಿನ ವಿಪರ್ಯಾಸ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಿದರು. ಅವರಿಂದು ಮೈಸೂರು ಸರಸ್ವತಿಪುರಂದಲ್ಲಿರುವ ಜೆಎಸ್ ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜಗದ್ಗುರು ಶ್ರೀವೀರ ಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ ಮತ್ತು ಜಗದ್ಗುರು ಶ್ರೀಶಿವರಾತ್ರೀಶ್ವರ ಮಹಾವಿದ್ಯಾಪೀಠ […]

ಮಂಗಳೂರು: ಟ್ಯಾಂಕರ್‌ ಬೈಕ್ ಡಿಕ್ಕಿ ಬೆಸೆಂಟ್‌ ವಿದ್ಯಾರ್ಥಿ ಮೃತ್ಯು

Thursday, February 13th, 2020
Nanthur Accident

ಮಂಗಳೂರು: ನಗರದ ಬೆಸೆಂಟ್‌ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಯೊಬ್ಬ ಟ್ಯಾಂಕರ್‌  ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಂತೂರು ಸರ್ಕಲ್‌ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮಣ್ಣಗುಡ್ಡೆ ನಿವಾಸಿ,  ಕಾರ್ತಿಕ್‌ ಮಲ್ಯ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ಕಾರ್ತಿಕ್‌ ಸುರತ್ಕಲ್‌ ಕಡೆಯಿಂದ ನಂತೂರು ಸರ್ಕಲ್‌ ಬಳಿ ಬೈಕಿನಲ್ಲಿ ಬರುತ್ತಿದ್ದಂತೆ ನಂತೂರು ಸರ್ಕಲ್‌ ಬಳಿ ಡಿಕ್ಕಿ ಹೊಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಕಾರಾತ್ಮಕ ಚಿಂತನೆಗಳಿಂದ ಮನುಷ್ಯ ಯಶಸ್ಸು ಕಾಣಲು ಸಾಧ್ಯ : ರಾಜಯೋಗಿನಿ ಬಿ.ಕೆ. ಶಿವಾನಿ

Monday, February 10th, 2020
shivani

ಮಂಗಳೂರು : ಸಂತೃಪ್ತಿಯ ಸಾರ್ಥಕ ಜೀವನಕ್ಕೆ  ಸಕಾರಾತ್ಮಕ ಚಿಂತನೆ ಗಳು, ಸಂತೋಷ, ಆರೋಗ್ಯ, ಆತ್ಮಶಕ್ತಿ ಕಾರಣ ವಾಗುತ್ತವೆ ಮತ್ತು ಸುಂದರ ಪರಿಸರ ಮತ್ತು ಸಮಾಜಕ್ಕೆ ಪೂರಕವಾಗುತ್ತದೆ ಎಂದು ಪ್ರಸಿದ್ಧ ವಾಗ್ಮಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ರಾಜಯೋಗಿನಿ ಬಿ.ಕೆ. ಶಿವಾನಿ ಹೇಳಿದರು. ಅವರು ರವಿವಾರ ನಗರದ ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಆರೋಗ್ಯ, ಸಂತೋಷ ಮತ್ತು ಸಾಮರಸ್ಯ (ಹೆಲ್ತ್‌, ಹ್ಯಾಪಿನೆಸ್‌ ಆ್ಯಂಡ್‌ ಹಾರ್ಮನಿ) ವಿಚಾರದಲ್ಲಿ ಉಪನ್ಯಾಸ ನೀಡಿದರು. ಮನುಷ್ಯನ ಚಿಂತನೆಗಳು ಆತನ ಜೀವನಕ್ರಮವನ್ನು ನಿರ್ಧರಿಸುತ್ತವೆ, ನಕಾರಾತ್ಮಕ ಚಿಂತನೆಗಳು […]

ನಾಳೆ ಮಂಗಳೂರಿನಲ್ಲಿ ಬ್ರಹ್ಮಾಕುಮಾರಿ ಶಿವಾನಿಯವರ ಕಾರ್ಯಕ್ರಮ

Saturday, February 8th, 2020
BK-Shivani

ಮಂಗಳೂರು : ವಿಶ್ವವಿಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿಯಾಗಿ ಗುರುತಿಸಲ್ಪಟ್ಟಿರುವ ಬ್ರಹ್ಮಾಕುಮಾರಿ ಶಿವಾನಿಯವರು ನಗರಕ್ಕೆ ಆಗಮಿಸಿದ್ದಾರೆ. ಆ ಪ್ರಯುಕ್ತ ಪ್ರತಿಷ್ಟಿತ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಶಿವಾನಿಯವರ ಇದು ಎರಡನೆಯ ಕಾರ್ಯಕ್ರಮವಾಗಿದೆ. 2010 ರಲ್ಲಿ ನಗರದ ಪುರಭವನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಂಗಳೂರಿನ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫೆಬ್ರುವರಿ 9 ರಂದು ಬೆಳಿಗ್ಗೆ10.30ರಿಂದ 12.30ರವರೆಗೆ “ಆರೋಗ್ಯ ಸಂತೋಷ ಮತ್ತು ಸಾಮರಸ್ಯ” ಎಂಬ ವಿಷಯದ ಮೇಲೆ ಹಾಗೂ ಸಾಯಂಕಾಲ 5.30ರಿಂದ 7.30 ರವರೆಗೆ ವಿರಾಮ… ಶಾಂತಿಗಾಗಿ” ಎನ್ನುವ […]

ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ

Saturday, February 8th, 2020
naagamandala

ಸುರತ್ಕಲ್ ‌: ಶ್ರೀ ವಿದ್ಯಾಧರ ಮುನಿ ಪ್ರತಿಷ್ಠಾಪಿತ ‘ಇಡ್ಯಾ ಶ್ರೀ ಮಹಾಲಿಂಗೇಶ್ವರ’ ದೇವರಿಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪೂರ್ವಾಹ್ನ ಘಂಟೆ 9.30 ರಿಂದ 9.45 ರವರೆ ಮೀನ ಲಗ್ನ ಸುಮುಹೂರ್ತದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ನಡೆದಿದೆ. ರಾತ್ರಿ 10 ಗಂಟೆಗೆ ನಾಗವನದಲ್ಲಿ ಹಾಲಿಟ್ಟು ಸೇವೆಯಾದ ನಂತರ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರು ಮುದ್ದುರು ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಅಷ್ಟಪವಿತ್ರ ನಾಗಮಂಡಲೋತ್ಸವವು ನಡೆದಿದೆ. ನಾಗಮಂಡಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ದೇವರ ನಾಗದರ್ಶನ ಪಡೆದು ಕೃತಾರ್ಥರಾದರು.  

ಬಿಜೆಪಿಯಲ್ಲಿ ಮೂಲ, ವಲಸಿಗ ಎಂಬುದೇ ಇಲ್ಲ : ಶ್ರೀರಾಮುಲು ಸ್ಪಷ್ಟನೆ

Thursday, February 6th, 2020
sriramulu

ಮಡಿಕೇರಿ : ಸಚಿವ ಸಂಪುಟ ಪುನರ್ ರಚನೆ ಕಸರತ್ತಿನ ಬಗ್ಗೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಮುಖ್ಯಮಂತ್ರಿಗಳು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಮರ್ಥರಿದ್ದಾರೆ. ಈ ಮೊದಲೇ ಭರವಸೆ ನೀಡಿದ್ದಂತೆ ಗೆದ್ದ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮೂಲ ಅಥವಾ ವಲಸಿಗ ಎಂಬುದೆಲ್ಲಾ ಬಿಜೆಪಿಯಲ್ಲಿ ಇಲ್ಲವೇ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.