ಅಡಿಕೆ ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನಿಗೆ ಹಲ್ಲೆ, ಮಕ್ಕಳ ಕಲ್ಯಾಣ ಇಲಾಖೆಗೆ ದೂರು

Friday, November 5th, 2021
Arecanut Thief

ಸುಳ್ಯ :  ಅಡಿಕೆ ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನಿಗೆ ಹಲ್ಲೆ ನಡೆಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗುತ್ತಿಗಾರಿನ ಸಮೀಪದ ಪುರ್ಲುಮಕ್ಕಿಯಲ್ಲಿ ಕಳೆದ ವಾರ  ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು ಹಲ್ಲೆ ನಡೆಸಿದ 10 ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಅಡಿಕೆ ಕದ್ದ ಆರೋಪದಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. […]

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಕ್ಯಾಂಪ್ಕೊ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

Tuesday, June 15th, 2021
campco

ಮಂಗಳೂರು :  ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಸಂಕಷ್ಟ ಸಮಯದಲ್ಲಿ ರೈತರ ಬೆನ್ನೆಲುಬಾಗಿ ನಿಂತ ಕ್ಯಾಂಪ್ಕೊ ಕೋವಿಡ್ ಸಂಕಷ್ಟ ಕಾಲದಲ್ಲಿ ಕೂಡ ರೈತರಿಗೆ ನೆರವಾಗಿ ಯೋಗ್ಯ ಬೆಲೆಯನ್ನು ನೀಡಿ ಅಡಿಕೆ ಖರೀದಿಸುವುದರಲ್ಲಿ ಯಶಸ್ವಿ ಆಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್ ಖಂಡಿಗೆ ಅವರು ತಿಳಿಸಿದರು. ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಸಹಯೋಗದೊಂದಿಗೆ ಪಾವೂರು, ವರ್ಕಾಡಿ ಯಲ್ಲಿ ಕಾರ್ಯಾರಂಭಿಸಿದ ನೂತನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದೀಗ ಸಂಸ್ಥೆಯ ಸಕ್ರಿಯ […]

ಅಡಿಕೆ ಹಾಗೂ ಬಾಳೆ ಗಿಡಗಳನ್ನು ಕಡಿದು ನಾಶ ಮಾಡಿದ ಸಹೋದರ

Thursday, April 30th, 2020
Vitla Farm

ವಿಟ್ಲ : ಕೋಪಗೊಂಡ ಅಣ್ಣನೊರ್ವ ತಮ್ಮನ ತೋಟಕ್ಕೆ ಪ್ರವೇಶ ಮಾಡಿ ಅಡಿಕೆ ಹಾಗೂ ಬಾಳೆ ಗಿಡಗಳನ್ನು ಕಡಿದು ನಾಶ ಮಾಡಿದ ಘಟನೆ ವಿಟ್ಲ ಹೋಬಳಿಯ ಕೆದಿಲ ಗ್ರಾಮದ ಗಾಣದಕೊಟ್ಯದಲ್ಲಿ ನಡೆದದಿದೆ. ಚಂದು ಮೂಲ್ಯ ಎಂಬವರ  ಸುಮಾರು 1.20 ಎಕರೆ ರಾಷ್ಟ್ರೀಯ ಹೆದ್ದಾರಿಯ ವಿಚಾರಕ್ಕಾಗಿ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಈ ಬಳಿಕ ಉಳಿದ ಜಾಗ ದಲ್ಲಿ ಬಾಳೆ ಗಿಡ ಮತ್ತು ಅಡಿಕೆ ಗಿಡ ಬೆಳೆದಿದ್ದರು. ಡೊಂಬಯ್ಯ ಎನ್ನುವ ವ್ಯಕ್ತಿ ಸಹೋದರನ ತೋಟದ 15 ಅಡಿಕೆ ಮರ ಮತ್ತು 7 ಬಾಳೆ ಸಸಿಗಳನ್ನು ಕಡಿದುಹಾಕಿದ್ದಾರೆ ಎನ್ನಲಾಗಿದೆ. ಉಳಿದ […]

ಕೋವಿಡ್ 19 : ಅಡಿಕೆ ಅಡವಿಟ್ಟರೆ ಬ್ಯಾಂಕ್ ಸಾಲ

Sunday, April 5th, 2020
Arrecanut

ಮಂಗಳೂರು:  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ರೈತರಿಗೆ ತುರ್ತಾಗಿ ಅಡಿಕೆ ಅಡಮಾನ ಸಾಲವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲು ಮುಂದಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಅಡಿಕೆ ಮಾರಾಟದಲ್ಲಿ ವ್ಯತ್ಯಯಗಳು ಕಂಡು ಬಂದಿರುವುದರಿಂದ ಅಡಿಕೆ ಧಾರಣೆಯಲ್ಲೂ ಕುಸಿತ ಕಂಡಿದೆ. ಇಂತಹ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಿಗೆ ಆರ್ಥಿಕ […]

ಕ್ಯಾಂಪ್ಕೋ ಸಂಸ್ಥೆಯಿಂದ ಪ್ರಥಮ ಹಂತದ ಅಡಿಕೆ ಚೀನಾ ದೇಶದ ಕಿಂಗ್ ಆಫ್ ಟೇಸ್ಟ್ ಕಂಪೆನಿಗೆ ರಪ್ತು

Saturday, November 26th, 2016
CAMPCO exports

ಮಂಗಳೂರು: ಚೀನಾದಲ್ಲಿ ಅಡಿಕೆಯ ಮೌತ್ ಪ್ರೆಶ್‌ರನ್ನು ಬಹಳ ಜನಪ್ರಿಯವಾಗಿ ಅಭಿವೃದ್ಧಿಪಡಿಸಿದ ಕಿಂಗ್ ಆಫ್ ಟೇಸ್ಟ್‌ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರ ಜೊತೆ ನಡೆಸಿದ ಮಾತುಕತೆ ಪ್ರಕಾರ ಕ್ಯಾಂಪ್ಕೋ ಸಂಸ್ಥೆ ಪ್ರಥಮ ಹಂತದ ಅಡಿಕೆಯನ್ನು ಪುತ್ತೂರಿನಿಂದ ರಪ್ತು ಮಾಡಿದೆ. ಶಿವಮೊಗ್ಗ, ಪುತ್ತೂರು ಹಾಗೂ ಕೊಯಂಬತ್ತೂರು ಪ್ರದೇಶದ ಆಯ್ದ ಅಡಿಕೆಯನ್ನು ಪುತ್ತೂರಿನಲ್ಲಿ ಸಂಸ್ಕರಣಗೊಳಿಸಿದ್ದು, ಭಾರತ ಸರ್ಕಾರದ ಅಧೀನದಲ್ಲಿರುವ ಕೃಷಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢೀಕರಣಗೊಂಡ ಈ ಉತ್ಪನ್ನಗಳನ್ನು ಚೆನೈ ಬಂದರಿನ ಮೂಲಕ ಚೀನಾ ದೇಶದ ಕಿಂಗ್ ಆಫ್ ಟೇಸ್ಟ್ ಕಂಪೆನಿಗೆ ರಪ್ತು […]

ಬೆಲೆ ವಿಮೆ ವ್ಯಾಪ್ತಿಗೆ ಅಡಿಕೆ: ಪ್ರಸ್ತಾವನೆಗೆ ಡಿಸಿ ಸೂಚನೆ

Friday, May 30th, 2014
DC Mangalore

ಮಂಗಳೂರು : ಅಡಿಕೆ ಬೆಲೆಯನ್ನು ತೋಟಗಾರಿಕೆ ಇಲಾಖೆಯ ಮೂಲಕ ಬೆಳೆ ವಿಮೆ ವ್ಯಾಪ್ತಿಗೆ ತರುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮುಂಗಾರು 2014ರ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಅಡಿಕೆ ಅಲ್ಲದೆ, ಕಾಳುಮೆಣಸು, ಕೋಕಾ, ಅನಾನಸು, ಗೇರು ಕೃಷಿಯನ್ನು ಬೆಳೆ ವಿಮಾ ವ್ಯಾಪ್ತಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸುವಂತೆ ಅವರು ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ದಕ್ಷಿಣ […]

ರೈತರ ಸಮಸ್ಯೆಗಳನ್ನು ಅವಲೋಕನ ಮಾಡಲು ಸೆ.25ರಂದು ಶಿವಮೊಗ್ಗದಲ್ಲಿ ಸಭೆ

Thursday, August 22nd, 2013
Nagaraja shetty

ಮಂಗಳೂರು :  ರಾಜ್ಯದಲ್ಲಿ ನಿರಂತರವಾಗಿ  ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೃಷಿಗೆ ಮದ್ದು ಸಿಂಪಡಿಸಲು ಸಾಧ್ಯವಾಗದೇ ಇದ್ದು ಸುಮಾರು ೫೦% ರಷ್ಟು ಕೊಳೆರೋಗ ತಗುಲಿದ್ದು, ಬೆಳೆದ ಅಡಿಕೆಗಳು ಉದುರಿ ಹೊಗಿವೆ. ಕೃಷಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದಾರೆ. ರೈತರ ನಷ್ಟಕ್ಕೆ ಸರಕಾರದ ಸಹಕಾರ ಅಗತ್ಯವಾಗಿದೆ ಎಂದು ಬಿಜೆಪಿ ಚುನಾವಣೆ ಸಮಿತಿ ಅಧ್ಯಕ್ಷ ನಾಗರಾಜ್ ಶೆಟ್ಟಿ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಮಾಜಿ ಮುಖ್ಯ ಮಂತ್ರಿ ಸದಾನಂದ ಗೌಡ, ಈಶ್ವರಪ್ಪ, ಹಾಗೂ […]

ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ : ಹಳೆ ಅಡಿಕೆ ಕಿಲೋ. 179 ರೂ.

Saturday, August 27th, 2011
Arecanut Bunch/ಅಡಿಕೆ

ಪುತ್ತೂರು : ಅಡಿಕೆ ಮಾರುಕಟ್ಟೆಗೆ ಸರಿಯಾಗಿ ಪೂರೈಕೆ ಆಗದಿರುವುದರಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇನ್ನಷ್ಟು ಚೇತರಿಕೆ ಉಂಟಾಗಿದೆ. ಶುಕ್ರವಾರ ಹಳೆ ಅಡಿಕೆ ಕೆ.ಜಿ.ಯೊಂದರ 179 ರೂ. ಮತ್ತು ಹೊಸ ಅಡಿಕೆ ಕೆ.ಜಿ.ಯೊಂದರ 168 ರೂ.ಗಳಿಗೆ ವಿಕ್ರಯಗೊಂಡಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದಾರೆ. ಗಡಿ ಪ್ರದೇಶ ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಲ ಪ್ರದೇಶದಲ್ಲಿ ಅಡಿಕೆ ಧಾರಣೆ ಪುತ್ತೂರಿಗಿಂತ ಕೆ.ಜಿ.ಯೊಂದರ 1 ರೂ. ಹೆಚ್ಚಿತ್ತು. ಎಂಬ ಮಾಹಿತಿಗಳು ಕೂಡಾ ಕೃಷಿಕರಿಂದ ಲಭ್ಯವಾಗಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯ ಪರಿಸ್ಥಿತಿ […]