ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಕಾರ್ಯಗಾರ

Wednesday, July 11th, 2018
campus

ಮೂಡುಬಿದಿರೆ: ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯಕೀಯ ಕಾರ್ಯಗಾರವನ್ನು ಮಂಗಳೂರಿನ ಖ್ಯಾತ ಪೆರಿಫೆರಲ್ ವ್ಯಾಸ್ಕ್ಯುಲರ್ ಸರ್ಜನ್ ಡಾ. ನರೆನ್ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಇಂದಿನ ಕಾಲಘಟ್ಟದಲ್ಲಿ ಡೀಪ್ ವೈನ್ ಥ್ರೊಂಬೋಸಿಸ್‍ನ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸಾ ಪರಿಕ್ರಮಗಳನ್ನು ವಿವರಿಸಿದರು. ಈ ಕಾಯಿಲೆಯ ಸಮಸ್ಯೆಗಳು, ಗಂಭೀರ ಪರಿಣಾಮಗಳು ಹಾಗೂ ಸಮರ್ಪಕ ಆಧುನಿಕ ಪರಿಹಾರೋಪಯಗಳ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್‍ನ ಪ್ರಸೂತಿ ತಜ್ಞೆ ಡಾ. ಹನ ಶೆಟ್ಟಿ ವಹಿಸಿದ್ದರು. […]