ಕೋವಿಡ್ ಸೋಂಕಿತ ವ್ಯಕ್ತಿಯ ಮೃತ ದೇಹ ಅದಲು ಬದಲು, ಮೃತ ವ್ಯಕ್ತಿಯ ಸಂಬಂಧಿಕರ ಆಕ್ರೋಶ

Monday, May 17th, 2021
Dead body

ಕಾರ್ಕಳ: ಆಸ್ಪತ್ರೆ ಸಿಬಂದಿಯ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಶವ ಬದಲಾಗಿರುವುದು ಸಂಬಂಧಿಕರಿಗೆ ತಿಳಿದು ಶವವನ್ನು ವಾಪಸ್ ಕಳಿಸಿದ ಘಟನೆ ಸೋಮವಾರ ನಡೆದಿದೆ. ಅಂತ್ಯ ಸಂಸ್ಕಾರಕ್ಕೆಂದು ಕಾರ್ಕಳದ ಕರಿಯಕಲ್ಲು ಸ್ಮಶಾನಕ್ಕೆ ಮೃತ ದೇಹ ತಂದಿದ್ದ ವೇಳೆ  ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಶೃಂಗೇರಿ ಮೂಲದ 44 ರ ವಯಸ್ಸಿನ ವ್ಯಕ್ತಿ ಕಾರ್ಕಳದ ತನ್ನ ಪತ್ನಿ ಮನೆಗೆ ಬಂದಿದ್ದ ಅವರಿಗೆ ಸೋಂಕು ದೃಢ ಪಟ್ಟಿತ್ತು. ಮಂಗಳೂರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.ಚಿಕಿತ್ಸೆ […]

ಶಿವನ ವಾಸಸ್ಥಾನ ರುದ್ರಭೂಮಿಯಲ್ಲಿ ಶಿವರಾತ್ರಿ ಆಚರಿಸಿದ ಭಕ್ತರು

Thursday, March 11th, 2021
Rudra Bhoomi

ಮಂಗಳೂರು  : ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ಸಾಮಾನ್ಯವಾಗಿ ರುದ್ರಭೂಮಿಯೆಂದರೆ ಭಯಪಟ್ಟುಕೊಳ್ಳುತ್ತಾರೆ. ಮಹಿಳೆಯರಂತೂ ಇತ್ತ ಕಾಲಿಡುವುದೇ ಅಪರೂಪ. ಆದರೆ, ಇಲ್ಲಿ ಯಾವುದೇ ಭಯವಿಲ್ಲದೇ ಮಧ್ಯರಾತ್ರಿಯವರೆಗೂ ಗುಂಪುಗುಂಪಾಗಿ ಜನಜಮಾಯಿಸಿ, ದೇವ ಸಂಕೀರ್ತನೆಯಲ್ಲಿ ಪಾಲ್ಗೊಂಡುಬೃಹತ್ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ […]

ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪಿಪಿಇ ಕಿಟ್ ತೆರೆದು ಮುಖದರ್ಶನ ಪಡೆದ ಕಾಂಗ್ರೆಸ್ ಮುಖಂಡರು

Monday, July 27th, 2020
ivan

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ,  ಶಾಸಕ ಯು.ಟಿ‌. ಖಾದರ್ ಮತ್ತು ಕೆಲವು  ಕಾಂಗ್ರೆಸ್ ನಾಯಕರು ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಜಾಗಕ್ಕೆ ತೆರೆಳಿ ಮೃತದೇಹದ ಪಿಪಿಇ ಕಿಟ್ ಅನ್ನು ಬಿಚ್ಚಿ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ  ಘಟನೆ ಬೋಳೂರಿನ ರುದ್ರಭೂಮಿಯಲ್ಲಿ ನಡೆದಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರು ತೆರಳಿ ಮೃತರ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೃದ್ಧೆ ಜು.24ರಂದು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ನಗರದ […]

ಎರಡು ತಿಂಗಳ ಮಗುವನ್ನು ಬಲಿ ಪಡೆದ ಕೊರೋನಾ, ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ‌ ಅಂತ್ಯಸಂಸ್ಕಾರ

Saturday, July 18th, 2020
kodimbala

ಮಂಗಳೂರು : ಆ ಪುಟ್ಟ ಮಗುವನ್ನೂ ಬಿಡಲಿಲ್ಲ ಕೊರೋನಾ, ಮಗು ಹುಟ್ಟಿ ಕೇವಲ ಎರಡೇ ತಿಂಗಳು, ಇನ್ನಷ್ಟೇ  ಪ್ರಪಂಚ ನೋಡಬೇಕಿತ್ತು. ಆದರೆ ಆ ಮಗುವಿಗೆ ದೈತ್ಯ  ಕೊರೋನಾ ದ ಜೊತೆ ಹೋರಾಡಲು ಸಾಧ್ಯವಾಗಲೇ ಇಲ್ಲ. ಕೊರೋನಾ ತನ್ನ ಮನೆಯವರನ್ನು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು  ಬಿಡಲಿಲ್ಲ ಕೊನೆಗೆ ಮಗುವಿನ ಅಂತ್ಯಸಂಸ್ಕಾರ ವನ್ನು ಬಜರಂಗದಳದ ಕಾರ್ಯಕರ್ತರು ನಡೆಸಬೇಕಾಯಿತು. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಗಾಣದಕೊಟ್ಯದ ದಂಪತಿಯ ಎರಡು ತಿಂಗಳ ಈ ಮಗು ವಾಂತಿ, ಕಫದಿಂದ ಬಳಲುತ್ತಿತ್ತು. ಆದ್ದರಿಂದ ಚಿಕಿತ್ಸೆಗೆ ಮಂಗಳೂರಿನ ಖಾಸಗಿ […]

ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಟಿಕ್ ಟಾಕ್, ನಾಲ್ವರ ಬಂಧನ

Sunday, June 14th, 2020
rudrabhomi

ಬಂಟ್ವಾಳ: ಸಜಿಪನಡು, ಕಂಚಿನಡ್ಕ ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಓಡಾಟ ನಡೆಸಿದ ಜೊತೆ ಅಸಭ್ಯರೀತಿಯಲ್ಲಿ ಟಿಕ್ ಟಾಕ್ ಮಾಡಿ ಹಿಂದೂ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ದೂರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಎಸ್.ಐ.ಪ್ರಸನ್ನ ನೇತ್ರತ್ವದ ತಂಡ ಕಾರ್ಯಚರಣೆ ನಡೆಸಿ ನಾಲ್ವರು ಆರೋಪಿಗಳ ಬಂದಿಸಿದ್ದಾರೆ. ಸ್ಥಳೀಯ ಸಜೀಪ ನಿವಾಸಿಗಳಾದ ಮೊಹಮ್ಮದ್ ಮಸೂದ್, ಮೊಹಮ್ಮದ್ಅಜೀಮ್, ಮೊಹಮ್ಮದ್ ಅಬ್ದುಲ್ ಲತೀಪ್ ಹಾಗೂ ಮೊಹಮ್ಮದ್ ಅರ್ಪಾಜ್ ಬಂಧಿತ ಆರೋಪಿಗಳು.

ನಿಮ್ಮ ಗ್ರಾಮದಲ್ಲಿ ರುದ್ರಭೂಮಿ ಕೊರತೆಯೇ? ತಹಶೀಲ್ದಾರರಿಗೆ ಮನವಿ ಸಲ್ಲಿಸಿ-ಎ.ಬಿ.ಇಬ್ರಾಹಿಂ

Monday, June 16th, 2014
Ibrahim

ಮಂಗಳೂರು : ಮನುಷ್ಯ ಬದುಕಿದ್ದಾಗ ಯಾವರೀತಿ ಗೌರವಾದರಗಳಿಂದ ಬದುಕು ಸಾಗಿಸುವನೋ ಅದೇ ರೀತಿ ಅವರು ಸತ್ತಾಗಲು ಅವರ ಪಾರ್ಥಿವ ಶರೀರವನ್ನು ಗೌರವಾದರಗಳಿಂದ ಮುಕ್ತಿ ಕಾಣಿಸಬೇಕು. ಇದಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ರುದ್ರಭೂಮಿ ಇರಲೇಬೇಕು. ಅದ್ದರಿಂದ ದ.ಕ.ಜಿಲ್ಲೆಯ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ರುದ್ರಭೂಮಿ ಕೊರತೆ ಬಗ್ಗೆ ವಿವರವಾದ ವರದಿಯೊಂದನ್ನು ಸಿದ್ದಪಡಿಸಲು ರುದ್ರಭೂಮಿ ಕೊರತೆ ಇರುವ ಗ್ರಾಮಸ್ಥರು ಕೂಡಲೇ ಮನವಿಗಳನ್ನು ಆಯಾ ತಹಶೀಲ್ದಾರರಿಗೆ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆ […]