ಹೊಸಬೆಟ್ಟು ಬೀಚ್ ಗೆ ಪ್ರವಾಸಕ್ಕೆ ಬಂದಿದ್ದ ಮೂವರು ಸಮುದ್ರದಲ್ಲಿ ಮುಳುಗಿ ಸಾವು
Wednesday, January 8th, 2025ಮಂಗಳೂರು: ಮಂಗಳೂರಿನ ಕುಳಾಯಿ ಬಳಿಯ ಹೊಸಬೆಟ್ಟು ಬೀಚ್ ಗೆ ಪ್ರವಾಸಕ್ಕೆ ಬಂದಿದ್ದ ಮೂವರು ಪ್ರವಾಸಿಗರು ಸಮುದ್ರಪಾಲಾಗಿದ್ದಾರೆ. ಮೃತರು ಬೆಂಗಳೂರಿನ ಸತ್ಯವೇಲು, ಚಿತ್ರದುರ್ಗದ ಮಂಜುನಾಥ್ ಮತ್ತು ಶಿವಮೊಗ್ಗದ ಶಿವಕುಮಾರ್ ಎಂದು ತಿಳಿದುಬಂದಿದೆ. ಪ್ರವಾಸಿಗರು ಸಮುದ್ರದ ಅಲೆಗೆ ಸಿಲುಕಿದ್ದನ್ನು ಕಂಡ ಸ್ಥಳೀಯರು ಮೀನುಗಾರರು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರು ಸಮುದ್ರಪಾಲಾಗಿದ್ದು ಬೀದರ್ ಮೂಲದ ಪರಮೇಶ್ವರ್ ಎಂಬಾತನನ್ನು ರಕ್ಷಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶಿವಕುಮಾರ್ ಮತ್ತು ಸತ್ಯವೇಲು ಎಂಬವರ ಮೃತದೇಹ ಸಿಕ್ಕಿದ್ದು ಮಂಜುನಾಥ್ ಮೃತದೇಹಕ್ಕೆ ಹುಡುಕಾಟ […]