ಮೀನುಗಾರಿಕಾ ದೋಣಿ ಮುಳುಗಿ 6 ಮಂದಿ ಮೀನುಗಾರರು ನಾಪತ್ತೆ
Friday, September 16th, 2011ಮಂಗಳೂರು: ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ 6 ಮಂದಿ ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಅಳಿವೆ ಬಾಗಿಲಿನ ಸಮೀಪ ಅರಬಿ ಸಮುದ್ರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ‘ಓಶಿಯನ್ ಫಿಶರೀಸ್- 2’ ಎಂಬ ಮೀನುಗಾರಿಕಾ ದೋಣಿಯಲ್ಲಿ 8 ದಿನಗಳ ಹಿಂದೆ 7 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಮೀನು ಹಿಡಿದು ಹಿಂದಿರುಗುತ್ತಿದ್ದಾಗ ಮಂಗಳೂರಿನ ಅಳಿವೆ ಬಾಗಿಲಿನ ಸಮೀಪ ದುರ್ಘಟನೆ ಸಂಭವಿಸಿದೆ. ದೋಣಿಯಲ್ಲಿದ್ದ ೭ಜನರ ಪೈಕಿ ದೋಣಿಯ ಚಾಲಕ ಬಳ್ಳಾರಿ ಹೊಸಪೇಟೆಯ ಕಾಂಬ್ಲಿಪುರ ಕಂಟರ್‌ಬಿನ್ನೆಯ ಶ್ರೀಕಾಂತ್, ಕೊಪ್ಪಳದ ನಾರಾಯಣ, ಮಂಗಳೂರು ಪಂಜಿಮೊಗರಿನ […]