ಮಂಗಳೂರು : ಭಾನುವಾರ ಸಂಜೆ ಬೋಳೂರು ನದಿ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು , ಕೊಲೆಯ ಶಂಕೆ ವ್ಯಕ್ತವಾಗಿದೆ. ಸಂಜೆಯ ವೇಳೆ ಸ್ಥಳೀಯರು ನದಿ ಕಿನಾರೆಯಲ್ಲಿ ಅಡ್ಡಾಡುತ್ತಿದ್ದ ವೇಳೆ ನದಿ ನೀರಿನಲ್ಲಿ ಶವ ತೇಲುತ್ತಿರುವುದನ್ನು ಕಂಡು ಸ್ತಳೀಯರು ಕೂಡಲೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಪರಿಶೀಲಿಸಿ ೨೪ ಗಂಟೆಗಳ ಮೊದಲೆ ಕೊಲೆಗೈದಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಶವಾಗಾರದಲ್ಲಿ ಇರಿಸಲಾಗಿದೆ.
ಮೃತ ವ್ಯಕ್ತಿಯ ತಲೆ, ಹಣೆ, ತುಟಿ ಮತ್ತು ಎರಡೂ ಕಿವಿಗಳ ಹಿಂಭಾಗದಲ್ಲಿ ಆಯುಧದಿಂದ ಚುಚ್ಚಿದ ಕಡಿದ ಗಾಯಗಳಿದ್ದು ಯಾರೋ ವ್ಯಕ್ತಿಯನ್ನು ಕೊಲೆಗೈದು ಬಳಿಕ ನದಿಗೆ ಎಸೆದಿರಬೇಕೆಂದು ಸಂಶಯಿಸಲಾಗಿದೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English