ಮಂಗಳೂರು : 2026-2027 ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (ಕೆಎಸ್ಸಿಎಎ) ನೂತನ ಅಧ್ಯಕ್ಷರಾಗಿ ಮಂಗಳೂರಿನ ಸಿ.ಎ. ಸುನಿಲ್ ಭಂಡಾರಿ ಅವರು ನಿಯೋಜನೆಗೊಂಡಿದ್ದಾರೆ. ತಮ್ಮ ಮೇಲಿಟ್ಟಿರುವ ನಂಬಿಕೆಗೆ ಧನ್ಯವಾದ ಅರ್ಪಿಸಿರುವ ಅವರು, ರಾಜ್ಯದ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಮತ್ತು ತಮ್ಮ ನಾಯಕತ್ವ ಹಾಗೂ ವೃತ್ತಿಪರ ಬದ್ಧತೆಯೊಂದಿಗೆ ಸಂಸ್ಥೆಯ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಬೊಳಿಯಾರು ತಾರಿಪಾಡಿಯ ದಿವಂಗತ ಕಾಂತಣ್ಣ ಭಂಡಾರಿ ಹಾಗೂ ಪೆಲಪಾಡಿ ವಸಂತಿ ಕೆ. ಭಂಡಾರಿ ದಂಪತಿಯ ಸುಪುತ್ರರಾಗಿರುವ ಸಿ.ಎ. ಸುನಿಲ್ ಭಂಡಾರಿ ಅವರು ತಮ್ಮ ವೃತ್ತಿ ಕ್ಷೇತ್ರದಲ್ಲಿ ವ್ಯಾಪಕ ಗುರುತಿಸಿಕೊಂಡಿದ್ದು, ಇದೀಗ ರಾಜ್ಯ ಮಟ್ಟದ ಪ್ರಮುಖ ಲೆಕ್ಕಪರಿಶೋಧಕರ ಸಂಘಟನೆಯ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









