ಮಂಗಳೂರು : ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ನಡೆದು ಅಕ್ಟೋಬರ್ 10ಕ್ಕೆ ಭರ್ತಿ 14 ವರ್ಷಗಳು ಪೂರೈಸಲಿವೆ. ಈ ಸುದೀರ್ಘ 14 ವರ್ಷಗಳ ನಿರಂತರ ಹೋರಾಟದ ಪ್ರತಿಫಲವಾಗಿ ಇದೀಗ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿರುವುದು ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಸಿಕ್ಕ ಬೃಹತ್ ಜಯವಾಗಿದೆ ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಂದು ಉಜಿರೆಯಿಂದ ಬೆಳ್ತಂಗಡಿಯವರೆಗೆ ಬೃಹತ್ ‘ನ್ಯಾಯದ ನಡಿಗೆ’ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ಹಿರಿಯ ನ್ಯಾಯವಾದಿಗಳ ತಂಡವೇ ಭಾಗವಹಿಸಲಿದೆ. ಎಸ್.ಐ.ಟಿ ತನಿಖೆಯನ್ನು ಯಾರು ನಡೆಸಿದರೂ ನಮಗೆ ಸಂಪೂರ್ಣ ನ್ಯಾಯ ಸಿಗುವ ವಿಶ್ವಾಸವಿದೆ. ಒಂದು ವೇಳೆ ಈ ಹೊಸ ತನಿಖೆಯಲ್ಲಿ ಏನಾದರೂ ಲೋಪದೋಷಗಳು ಕಂಡುಬಂದರೆ ತಕ್ಷಣವೇ ಅದನ್ನು ಸುಪ್ರೀಂ ಕೋರ್ಟ್ನ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಸಂತೋಷ್ ರಾವ್ ಅವರಿಗೆ ಎರಡು ಪ್ರಮುಖ ತನಿಖಾ ಸಂಸ್ಥೆಗಳು ಕ್ಲೀನ್ ಚಿಟ್ ನೀಡಿವೆ. ಹಿಂದಿನ ತನಿಖಾ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿಗೆ ನ್ಯಾಯಾಲಯ ಈಗಾಗಲೇ ಚಾಟಿ ಬೀಸಿದೆ. ಈ ಹೊಸ ತನಿಖೆಯ ಮೂಲಕ ಪ್ರಕರಣದ ನೈಜ ಅಪರಾಧಿಗಳು ಶೀಘ್ರದಲ್ಲೇ ಹೊರಬರಲಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









