ಬಂಟ್ವಾಳ : ಪಾಣೆಮಂಗಳೂರು ಬೋಳಂಗಡಿ ನಿವಾಸಿ 27 ವರ್ಷ ಪ್ರಾಯದ ಯುವಕನೊಬ್ಬ ಕೇರಳ ರಾಜ್ಯಕ್ಕೆ ಉದ್ಯೋಗಕ್ಕೆಂದು ತೆರಳಿ ವಾಪಸಾಗದೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯುವಕನ ಕುಟುಂಬಸ್ಥರು ನೀಡಿದ ದೂರಿನನ್ವಯ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೋಧನಾ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವಕನನ್ನು ಸಂತೋಷ್ ಎಂದು ಗುರುತಿಸಲಾಗಿದ್ದು, ಈತ ಕೆಂಪು ಕಲ್ಲು ಸಾಗಾಟ ಮಾಡುವ ಲಾರಿಗಳಲ್ಲಿ ಲೋಡಿಂಗ್ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಕಳೆದ ಮೇ 1 ರಂದು ಬೆಳಗಿನ ಜಾವ ಕೆಲಸದ ನಿಮಿತ್ತ ಕೇರಳಕ್ಕೆ ತೆರಳುತ್ತಿರುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದನು.
ಹೊರಡುವ ಸಂದರ್ಭದಲ್ಲಿ ಎರಡು ತಿಂಗಳ ಅವಧಿಯ ಬಳಿಕ ಮನೆಗೆ ಮರಳುವುದಾಗಿ ತಿಳಿಸಿದ್ದ ಸಂತೋಷ್, ತದನಂತರ ಇದುವರೆಗೆ ಮನೆಗೂ ಮರಳಿಲ್ಪಡದೆ, ಕುಟುಂಬಸ್ಥರೊಂದಿಗೆ ಯಾವುದೇ ದೂರವಾಣಿ ಸಂಪರ್ಕವನ್ನೂ ಇಟ್ಟುಕೊಂಡಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಬಂಟ್ವಾಳ ಪಟ್ಟಣ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









