ಮಂಗಳೂರು :ನಗರದ ಯುವ ಉದ್ಯಮಿ ವಿಜಯೇಂದ್ರ ಭಟ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ಸಂಜೆ 6 ರ ಸುಮಾರಿಗೆ ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ಬಳ್ಳಾಲ್ಬಾಗ್ ಸಮೀಪ ನಡೆದಿದೆ.
ಸುದೀಂದ್ರ ಫುಡ್ ಇಂಡರ್ಸ್ಟ್ರೀಯಲ್ ಹಾಗೂ ಪಿವಿಎಸ್ ಸಮೀಪದ ಸುದೀಂದ್ರ ಸೂಪರ್ ಮಾರ್ಕೇಟ್ನ ಮತ್ತು ಮಣ್ಣ ಗುಡ್ಡದಲ್ಲಿರುವ ಟೋಮ್ ಅಂಡ್ ಇಲ್ಲಿ ರೆಸ್ಟೊರೆಂಟಿನ ಮಾಲಕರಾದ ವಿಜಯೇಂದ್ರ ಭಟ್ ಅವರಿಗೆ ವಿಕ್ಕಿ ಶೆಟ್ಟಿ ಯಿಂದ ಹಪ್ತಾ ವಸೂಲಿಗಾಗಿ ಕರೆ ಬಂದಿತ್ತು.
ವಿಜಯೇಂದ್ರ ಭಟ್ ಅವರು ಇಂದು ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಬಳ್ಳಾಲ್ ಬಾಗ್ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಪಲ್ಸರ್ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ಕೊಳ್ಳುವ ಭರದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕೊಂದಕ್ಕೆ ದುಷ್ಕರ್ಮಿಗಳ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದುಷ್ಕರ್ಮಿಗಳು ರಸ್ತೆಗೆ ಉರುಳಿ ಬಿದ್ದು ಬಳಿಕ ಎದ್ದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಜಯೇಂದ್ರ ಭಟ್ ಚಲಾಯಿಸುತ್ತಿದ್ದ ಕಾರಿನ ಕಿಟಕಿಗೆ ಗುಂಡು ಬಿದ್ದಿದೆ. ಗುಂಡು ಕಿಟಕಿಗೆ ಬಡಿದ ಪರಿಣಾಮ ಅದೃಷ್ಟ ವಶಾತ್ ದೊಡ್ಡ ಅಪಾಯವೊಂದು ತಪ್ಪಿದ್ದಂತಾಗಿದೆ.
ಇತ್ತೀಚಿಗೆ ಹಣಾಕಾಸು ವಹಿವಾಟು ನಡೆಸುವ ವ್ಯವಹಾರವನ್ನು ಕೂಡ ಆರಂಭಿಸಿರುವ ವಿಜೆಯೇಂದ್ರ ಭಟ್ ಅವರಿಗೆ ಭೂಗತ ರೌಡಿ ವಿಕ್ಕಿ ಶೆಟ್ಟಿಯಿಂದ ಕಳೆದ ನಾಲ್ಕೈದು ದಿನಗಳಿಂದ ಬೆದರಿಕೆ ಕರೆ ಬಂದಿತ್ತು ಎಂದು ವಿಜಯೇಂದ್ರ ಭಟ್ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಕಂಪ್ಲೇಂಟ್ ನೀಡಲಾಗಿದೆ ಎಂದಿದ್ದಾರೆ.
ಸ್ಥಳಕ್ಕೆ ಡಿಸಿಪಿ ಧರ್ಮಾಯ್ಯ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English