ಮಂಗಳೂರು: ಬೋಳೂರು-ತಣ್ಣೀರುಬಾವಿ ನಡುವೆ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಶುಕ್ರವಾರ ಕ್ರೇನ್ ಒಂದು ನದಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗ್ಗೆ ಸುಮಾರು 9.20ರ ವೇಳೆಗೆ ಸೇತುವೆಯ ಪಿಲ್ಲರ್ಗಳ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಜೋಡಿಸುವ ಕಾರ್ಯವನ್ನು ಎರಡು ಕ್ರೇನ್ಗಳ ಸಹಾಯದಿಂದ ನಡೆಸಲಾಗುತ್ತಿತ್ತು. ಈ ಪ್ರಕ್ರಿಯೆಯ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಸ್ಲ್ಯಾಬ್ ಜಾರಿದ್ದು, ಅದರೊಂದಿಗೆ ಒಂದು ಕ್ರೇನ್ ಕೂಡ ನದಿ ನೀರಿಗೆ ಬಿದ್ದಿದೆ.
ನೀರಿಗೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್ ಅಲ್ಲೇ ನಿಂತಿದ್ದ ಬೋಟ್ ಒಂದರ ಮೇಲೆ ಅಪ್ಪಳಿಸಿದ್ದರಿಂದ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಬೋಟ್ನಲ್ಲಿ ಯಾರೂ ಇರದ ಕಾರಣ ಸಂಭವಿಸಬಹುದಾಗಿದ್ದ ಭಾರಿ ಪ್ರಾಣಾಪಾಯವೊಂದು ತಪ್ಪಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಬ್ಬರು ಕ್ರೇನ್ ಕಾರ್ಮಿಕರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









