ಬೆಂಗಳೂರು : ಆ್ಯಂಕರ್ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಇಂದು ಆಗಸ್ಟ್ 28ರ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್ನಲ್ಲಿ ಕೊಡಗು ಮೂಲದ ರೋಷನ್ ಜೊತೆ ಮದುವೆ ನೆರವೇರಿದ್ದು, ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.
ಅನುಶ್ರೀ ಅವರು ದಿ. ಪವರ್ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಅವರು ಅಭಿಮಾನಿ. ಅವರ ಯೂಟ್ಯೂಬ್ ಚಾನೆಲ್ನ ಲೋಗೋ ಸಹ ನಟ ಪುನೀತ್ ರಾಜ್ಕುಮಾರ್ ಅವರದ್ದೇ ಇದೆ. ಇದೇ ಕಾರಣಕ್ಕೆ ಇಂದು ವಿವಾಹ ಕಾರ್ಯಕ್ರಮಕ್ಕೆ ಅನುಶ್ರೀ ಹಾಗೂ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಸಹ ಆಗಮಿಸಿದ್ದರು. ಆದರೆ, ಅಭಿಮಾನಿಗಳು ನಿರಾಸೆಗೆ ಒಳಗಾಗಿದ್ದಾರೆ.
ಮದುವೆಗೂ ಹಿಂದಿನ ದಿನ ಬುಧವಾರ (ಆ.27) ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಅನುಶ್ರೀ ಅವರ ಮದುವೆಯನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದರು. ಆದರೆ ಮದುವೆ ಸಂಭ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಹಲವು ಅಭಿಮಾನಿಗಳಿಂದ ಸಾಧ್ಯವಾಗಿಲ್ಲ. ಅಪಾರ ಪ್ರಮಾಣದ ಅಭಿಮಾನಿಗಳು ಸೇರಿದ್ದರಿಂದ ಅವರನ್ನು ನಿಯಂತ್ರಿಸುವುದಕ್ಕೆ ಪೊಲೀಸರಿಗೂ ಕಷ್ಟವಾಗಿದೆ. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಆ್ಯಂಕರ್ ಅನುಶ್ರೀ ಅವರು ಬೆಳೆದಿರುವುದು ಹಾಗೂ ಇಷ್ಟೊಂದು ಹೆಸರು ಮಾಡಿರುವುದೇ ಅಭಿಮಾನಿಗಳಿಂದ. ನಾವೆಲ್ಲಾ ಇಲ್ಲಿ ಫ್ರೀಯಾಗಿ ಊಟ ಮಾಡುವುದಕ್ಕೆ ಬಂದಿಲ್ಲ. ಅಕ್ಷತೆ ಹಾಕಿ ವಧು-ವರರನ್ನು ನೋಡೋಣ ಎಂದು ಬಂದಿದ್ದೇವೆ. ಆದರೆ ನಮಗೆ ಅವಮಾನ ಮಾಡಲಾಗಿದೆ ಎಂದು ಅವರ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಅನುಶ್ರೀ ಮದುವೆಯಲ್ಲಿ ಅಭಿಮಾನಿಗಳಿಗೆ ತುಂಬಾ ಇನ್ಸಲ್ಟ್ ಮಾಡಲಾಗಿದೆ ಅಂತಾ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಮನರಂಜನೆ, ಸುದ್ದಿಗಳು









