ಮಂಗಳೂರು : ನಾದಸ್ವರ ಕರೋಕೆ ಮ್ಯೂಸಿಕ್ ಸಂಸ್ಥೆಯ ಆಶ್ರಯದಲ್ಲಿ ‘ಸ್ವಾತಂತ್ರ್ಯೋತ್ಸವ ಸಂಭ್ರಮ’ ಕಾರ್ಯಕ್ರಮವು ಭಾನುವಾರ, ಆಗಸ್ಟ್ 16ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೋಳೂರಿನ ಜಾರಂದಾಯ ದೈವಸ್ಥಾನದ ಬಳಿ ಇರುವ ‘ಸಾಯಿ ನಮನ’ ನಿಲಯದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿಯಿತು.
ಪಲ್ಲವಿ ಶೆಣೈ ಮತ್ತು ಸುಜಾತ M.H. ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಾಂಸ್ಕೃತಿಕ ಸಮಾರಂಭಕ್ಕೆ ಅನುರಾಧ ಮತ್ತು ಬಳಗದವರು ನಾಡ ಗೀತೆ ಹಾಡಿ ಅದ್ಧೂರಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ನಾಯ್ಕ್ ಕಿಶೋರ್ ಕುಮಾರ್ , ಜಯಾನಂದ ಎನ್ ನೂಜಿ ಬೈಲ್ ಆರಕ್ಷಕರು ಕಂಕನಾಡಿ ಪೊಲೀಸ್ ಠಾಣೆ , ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ASI) ಗೋಪಾಲ ಕೃಷ್ಣ ಕುಂದರ್, ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (PSI) ಶ್ರೀಮತಿ ನಳಿನಿ, ಮಾಜಿ ವಾಯು ಸೈನಿಕ ಹಾಗೂ ಮಾಜಿ PDO ರವೀಂದ್ರನಾಥ್ ಮತ್ತು ಮಾಜಿ ವಾಯು ಸೈನಿಕ ಹಾಗೂ SBI ಬ್ಯಾಂಕ್ ಅಧಿಕಾರಿ ಮುರಳೀಧರನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವಾನ್ವಿತ ಅತಿಥಿಗಳು ದೀಪ ಪ್ರಜ್ವಲಿಸಿ ಶುಭ ಕೋರಿದ ನಂತರ, ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.
ಗಾಯಕರಾದ ಲೆಸ್ಲಿ ಡಿ’ಕ್ರೂಸ್ ಹಾಗೂ R.A. ಗಣೇಶ್ ಮಂಗಳೂರು ಇವರು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜನೆಯನ್ನು ಸುಜಾತ ಸುವರ್ಣ, ಅಖಿಲೇಶ್ ಹಾಗೂ ಲೆಸ್ಲಿ ಡಿ’ಕ್ರೂಸ್ ಮಾಡಿದರು.
ಅನುರಾಧ ಅವರಿಂದ ವಂದನಾರ್ಪಣೆ ಹಾಗೂ ಲೋಹಿತ್ ಬೆಂಗ್ರೆ ಅವರಿಂದ ಕಾರ್ಯಕ್ರಮದ ನಿರೂಪಣೆ ಅಚ್ಚುಕಟ್ಟಾಗಿ ಮೂಡಿಬಂದಿತು.
ಕಾರ್ಯಕ್ರಮದ ಸಲಹೆಗಾರರಾಗಿ ಗೋಪಾಲಕೃಷ್ಣ ಕುಂದರ್, ಗೋಪಿನಾಥ ಕಾಮತ್, ಕಿಶೋರ್ ಕುಮಾರ್ ಹಾಗೂ ರವೀಂದ್ರನಾಥ್ ಅವರು ಮಾರ್ಗದರ್ಶನ ನೀಡಿದರು. ಮಾಧ್ಯಮ ಸಲಹೆಗಾರರಾಗಿ ರಮೇಶ್ ಕಲಾಶ್ರೀ ಸ್ಟುಡಿಯೋ, ಹಾಗೂ ಅನುರಾಧ, ಸುನಿಲ್, ರೂಪ , ಮಹೇಶ್ ಪಾಲ್ , ಸುಜಾತ M.K., ಸುಜಯ, ಯೋಗಿಶ್ ನಾಯಕ್ , ಮಾಲಿನಿ, ರೇಖಾ ಶೆಣೈ , ಪಲ್ಲವಿ ಶೆಣೈ, ನಾರಾಯಣ ಪೈ, ಮೀನಾಕ್ಷಿ ಪೈ, ವಿದ್ಯಾ ರೈ, ಯೋಗೀಶ್ ನಾಯಕ್ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
ನೇರಪ್ರಸಾರ ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









