ಮಂಗಳೂರು : ‘ಕೇರಳ ಸಮಾಜಂ’ ಕೆ. ಎಸ್. ರಾವ್ ರಸ್ತೆ ಮಂಗಳೂರು ಸಂಸ್ಥೆಯ ವತಿಯಿಂದ ಕೊಡಿಯಾಲ್ಬೈಲ್ನ ‘ಕೂಟ್ಟಕ್ಕಳ ಸಭಾಂಗಣ’ದಲ್ಲಿ (Koottakkala Auditorium) ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ‘ಓಣಂ’ ಹಬ್ಬದ ಆಚರಣೆಯು ಸಂಭ್ರಮ-ಸಡಗರದಿಂದ ಸಂಪನ್ನಗೊಂಡಿತು.
ಬೆಳಿಗ್ಗೆ ಆಕರ್ಷಕ ‘ಪೂಕಳಂ’ (ಹೂವಿನ ಅಲಂಕಾರ) ಸ್ಪರ್ಧೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ಕೇರಳ ಸಮಾಜಂನ ಕಲಾ ವಿಭಾಗದ ಸದಸ್ಯರು ಪ್ರದರ್ಶಿಸಿದ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಮನರಂಜನಾ ಕಲಾಪ್ರದರ್ಶನಗಳು ಸಭಿಕರ ಗಮನ ಸೆಳೆದವು. ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಎ. ಜೆ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎ. ಜೆ. ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸುರೇಶ್ಚಂದ್ರ ಶೆಟ್ಟಿ, ಕರುಣಾ ಇನ್ಫ್ರಾಸ್ಟ್ರಕ್ಚರ್ ಮಾಲಕ ಕರುಣಾಕರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸಮಾಜಂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಟಿ. ಕೆ. ರಾಜನ್ ವಹಿಸಿದ್ದರು. ಆರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ಮ್ಯಾಕ್ಸಿನ್ ಸೆಬಾಸ್ಟಿಯನ್ ಸ್ವಾಗತಿಸಿದರೆ, ಅಂತ್ಯದಲ್ಲಿ ಉಪಾಧ್ಯಕ್ಷರಾದ ಶ್ರೀ ಟಿ. ಎ. ಅಶೋಕನ್ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಮನರಂಜನಾ ಪ್ರದರ್ಶನಗಳು ಮುಂದುವರಿದವು.
ಮಧ್ಯಾಹ್ನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವ ಸದಸ್ಯರಿಗೆ ಹಾಗೂ ಅತಿಥಿಗಳಿಗೆ ಸಾಂಪ್ರದಾಯಿಕ ಶೈಲಿಯ ಖಾದ್ಯಗಳನ್ನೊಳಗೊಂಡ ವಿಶೇಷ ‘ಓಣಸದ್ಯ’ (ವಿಶೇಷ ಭೋಜನ) ಬಡಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಹಾಗೂ ಸಮಾಜದ ಬಾಂಧವರು ಹಬ್ಬದ ಸೌಹಾರ್ದಯುತ ಕೂಟವನ್ನು ಆನಂದಿಸಿದರು.
ಕೊನೆಯಲ್ಲಿ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಮಾಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷರುಗಳಾದ ಗೋಪಾಲನ್ ನಾಯರ್ ಕೆ. ಹಾಗೂ ಟಿ. ಎ. ಅಶೋಕನ್, ಕಾರ್ಯದರ್ಶಿ ಮ್ಯಾಕ್ಸಿನ್ ಸೆಬಾಸ್ಟಿಯನ್, ಜೊತೆ ಕಾರ್ಯದರ್ಶಿ ಮಹಮ್ಮದ್ ಹನೀಫ್, ಕೋಶಾಧಿಕಾರಿ ರಾಜನ್ ಪಿ. ಹಾಗೂ ಗ್ರಂಥಪಾಲಕ ಮನೋಹರನ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅಜಿ ಕುಮಾರ್, ರಾಯ್ ಜಾನ್, ದಿನೇಶ್ ಎಂ., ರಮೇಶ್ ಕಾಪಿಕಾಡ್, ಸಾಜನ್ ಎ. ಎಸ್., ವಿ. ಎಂ. ಸತೀಶನ್, ಸುಗುಣನ್ ಎ. ವಿ., ಮುರಳಿ ಹೆಚ್., ರಾಣಿ ಕಲಾಧರನ್ ಮತ್ತು ವಿ. ಜಯಲಕ್ಷ್ಮಿ ಹಾಗೂ ಸಂಚಾಲಕರುಗಳಾದ ಡಾಲಿಯಾ ದೀಪಕ್, ನಾರಾಯಣನ್ ಕೆಲೋತ್ (ಕಲಾ ವಿಭಾಗ), ಶೈಜಾ ಸತ್ಯನ್ (ವನಿತಾ ವಿಭಾಗ) ಮತ್ತು ಶ್ರೀರಾಜ್ (ಯುವ ವಿಭಾಗ) ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









