ಮಂಗಳೂರು : ಪತ್ರಕರ್ತ ಹಾಗೂ ರಂಗಭೂಮಿ-ಸಿನಿಮಾ ಕಲಾವಿದ ನರೇಂದ್ರ ಕೆರೆಕಾಡು ಅವರ ತಾಯಿ, ಮೂಲ್ಕಿ ಕೆರೆಕಾಡಿನ ಸ್ವಾತಂತ್ರ್ಯ ಸೇನಾನಿ ದಿವಂಗತ ಸೋಮಪ್ಪ ಪೂಜಾರಿ ಮನೆತನದ “ನಮ್ಮನೆ” ನಿವಾಸಿ ಮೋನಪ್ಪ ಪೂಜಾರಿ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಪೂಜಾರ್ತಿ (81) ಅವರು ಆಗಸ್ಟ್ 22ರಂದು ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತಿ, ಪುತ್ರ ನರೇಂದ್ರ ಕೆರೆಕಾಡು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅಂತಿಮ ಕ್ರಿಯಾ ವಿಧಿವಿಧಾನಗಳು ಬಪ್ಪನಾಡುವಿನ ಬಡಗುಹಿತ್ಲುವಿನಲ್ಲಿ ನೆರವೇರಿದವು. ಬಳಿಕ ಕೆರೆಕಾಡು ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿದ್ದು, ಬಂಧು-ಮಿತ್ರರು ಹಾಗೂ ಆಪ್ತರು ಮೃತರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಶ್ರೀಮತಿ ಲಕ್ಷ್ಮೀ ಪೂಜಾರ್ತಿ ಅವರ ನಿಧನಕ್ಕೆ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಕಂಬನಿ ಮಿಡಿದಿದ್ದಾರೆ.
ಅಲ್ಲದೆ, ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾರ್ಡ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ನ್ಯಾಯವಾದಿ ಬಿಪಿನ್ ಪ್ರಸಾದ್ ಮೂಲ್ಕಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಯುವವಾಹಿನಿ ಘಟಕದ ಅಧ್ಯಕ್ಷೆ ಶ್ರೀಮತಿ ಚರಿಷ್ಮಾ ಶ್ರೀನಿವಾಸ್, ಬಿರುವೆರ್ ಕುಡ್ಲದ ಕಿಶೋರ್ ಸಾಲ್ಯಾನ್, ಸಮಾಜ ಸೇವಕ ಗೋಪಿನಾಥ ಪಡಂಗ, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ್ ಬಪ್ಪನಾಡು, ವಿಜಯಾ ಕಲಾವಿದರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಕುಮಾರ್ ಪಿ.ಆರ್. ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









