ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧ ಧಾರ್ಮಿಕ ಪರ್ವ ನಾಗರ ಪಂಚಮಿಯನ್ನು ಸೋಮವಾರ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಕರಾವಳಿಯ ವಿವಿಧ ನಾಗಕ್ಷೇತ್ರಗಳು ಹಾಗೂ ಕುಟುಂಬದ ಮೂಲ ನಾಗಬನಗಳಲ್ಲಿ ಭಕ್ತಾದಿಗಳ ಕಲರವ ಮನೆಮಾಡಿತ್ತು. ಪ್ರಮುಖವಾಗಿ ಮಂಗಳೂರು ಸಮೀಪದ ಇತಿಹಾಸ ಪ್ರಸಿದ್ಧ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ನಾಗಾರಾಧಕರು ದೇವರ ದರ್ಶನ ಪಡೆದು ತಂಬಿಲ ಸೇವೆಗಳನ್ನು ಸಲ್ಲಿಸಿದರು.
ಪರಂಪರಾಗತ ಪದ್ಧತಿಯಂತೆ ಕರಾವಳಿಯ ಭಕ್ತರು ತಮ್ಮ ಪಿತೃಪೂರ್ವಜರ ಮೂಲ ನಾಗಬನಗಳಿಗೆ ತೆರಳಿ ನಾಗದೇವರಿಗೆ ತನು ಅರ್ಪಿಸುವ ಪಾವನ ಕಾರ್ಯದಲ್ಲಿ ತೊಡಗಿಸಿಕೊಂಡರು. ಪ್ರತಿಯೊಂದು ನಾಗಸನ್ನಿಧಿಯಲ್ಲಿಯೂ ವಿಶೇಷ ಪೂಜೆ ಹಾಗೂ ತಂಬಿಲ ಸೇವೆಗಳು ನೆರವೇರಿದವು. ಈ ಪವಿತ್ರ ದಿನದಂದು ಭಕ್ತರು ಅತ್ಯಂತ ಶ್ರದ್ಧೆಯಿಂದ ನಾಗದೇವರಿಗೆ ಹಾಲು ಮತ್ತು ಎಳೆನೀರಿನ (ಸೀಯಾಳ) ಅಭಿಷೇಕ ನೆರವೇರಿಸಿ, ತಮ್ಮ ಕುಟುಂಬದ ಅಭಿವೃದ್ಧಿಗಾಗಿ ಮತ್ತು ಸರ್ವ ಸಂಕಷ್ಟಗಳ ನಿವಾರಣೆಗಾಗಿ ಪ್ರಾರ್ಥಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









