ಕಲಾಂಗಣ್‌ನಲ್ಲಿ 4 ನೇ ವಿಶ್ವ ಕೊಂಕಣಿ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭ

1:05 PM, Monday, December 10th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Global Konkani Music Awardಮಂಗಳೂರು : ಮಂಗಳೂರು ಶಕ್ತಿನಗರದ ಕಲಾಂಗಣ್‌ ಸಭಾಂಗಣದಲ್ಲಿ ಮಾಂಡ್ ಸೋಭಾಣ್ ಸಂಸ್ಥೆ ವತಿಯಿಂದ ನಾಲ್ಕನೇ ವಿಶ್ವ ಕೊಂಕಣಿ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ಸಂಜೆ ನಡೆಯಿತು. 2011ರ ಅತ್ಯುತ್ತಮ ಮಹಿಳಾ ಗಾಯಕಿ ಪ್ರಶಸ್ತಿಯನ್ನು ಲವಿಟಾ ಲೋಬೊ ಹಾಗೂ ಅತ್ಯುತ್ತಮ ಪುರುಷ ಗಾಯಕ ಪ್ರಶಸ್ತಿಯನ್ನು ಬೆಂಗಳೂರಿನ ಬುಟ್ಟೋ ಪಡೆದುಕೊಂಡರು. ಅತ್ಯುತ್ತಮ ಸಂಗೀತ ಸಾಹಿತ್ಯ ಪ್ರಶಸ್ತಿಯನ್ನು ಅಂಜಲೋರಿನ ರೋಶನ್ ಡಿಸೋಜ, ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದಿವಂಗತ ಚಾಫ್ರಾ ಡಿಕೋಸ್ತಾ, ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಹೊನ್ನಾವರದ ಕಜೆತನ್ ಡಯಾಸ್ ಹಾಗೂ ಅತ್ಯುತ್ತಮ ಸಂಗೀತ ಅಲ್ಬಾಂ ಪ್ರಶಸ್ತಿಯನ್ನು ಮಂಗಳೂರಿನ ಐವನ್ ಲೋಬೊ ತಂಡ ಪಡೆದುಕೊಂಡವು.

4ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರಕ್ಕೆ ಜಗತ್ತಿನ ವಿವಿಧ ದೇಶಗಳಿಂದ 6 ವಿಭಾಗಗಳಲ್ಲಿ 162 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ತೀರ್ಪುಗಾರರು ಪ್ರತಿ ವಿಭಾಗಗಳಲ್ಲಿ ತಲಾ ಮೂವರು ಅತ್ಯುತ್ತಮ ಎನ್ನಲಾದ ಸ್ಪರ್ಧಿಗಳನ್ನು ಆಂತಿಮ ಸುತ್ತಿಗೆ ಆಯ್ಕೆ ಮಾಡಿದ್ದರು. ಪುರಸ್ಕಾರವು 25,000 ರೂಪಾಯಿ ನಗದು, ಬಿರುದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಮತ್ತು ಗೌರವ ಅತಿಥಿ ಗೋವಾದ ಕಲಾವಿದ ಅರ್ಮಾಂಡೊ ಗೊನ್ಸಾಲ್ವಿಸ್‌ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಮಾಂಡ್ ಸೋಭಾಣ್ ಸಂಸ್ಥೆ ಗುರ್ಕಾರ್ ಎರಿಕ್ ಒಝಾರಿಯೋ, ಅಧ್ಯಕ್ಷ ಸ್ಟೇನಿ ಅಲ್ವಾರೀಸ್, ಮಾಜಿ ಅಧ್ಯಕ್ಷ ಲೂಯಿ ಜೆ. ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English