ಮೂಡಬಿದಿರೆ: ಪುತ್ತೂರಿನಲ್ಲಿ ಮದುವೆ ಮುಗಿಸಿಕೊಂಡು ಹೆಬ್ರಿಯತ್ತ ಪ್ರಯಾಣಿಸುತ್ತಿದ್ದ ವಧು-ವರರು ಮತ್ತು ಅವರ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ನಲ್ಲಿ ಬೃಹತ್ ಗಾತ್ರದ ಹಾವು ಪ್ರತ್ಯಕ್ಷವಾಗಿ ಕ್ಷಣಕಾಲ ಆತಂಕ ಸೃಷ್ಟಿಸಿದ ಘಟನೆ ಮೂಡಬಿದಿರೆಯಲ್ಲಿ ವರದಿಯಾಗಿದೆ.
ಬಸ್ ಚಾಲಕನು ಮೂಡಬಿದಿರೆ ಹೋಟೆಲ್ `ಗೋಳಿಬಜೆ ಸೆಂಟರ್’ ಬಳಿ ವಾಹನ ನಿಲ್ಲಿಸಿ ಚಹಾ ಕುಡಿಯಲು ಹೋದ ಸಂದರ್ಭದಲ್ಲಿ ಈ ಅನಿರೀಕ್ಷಿತ ಘಟನೆ ಬೆಳಕಿಗೆ ಬಂದಿದೆ. ಚಾಲಕ ಬಸ್ ಅನ್ನು ಗಮನಿಸುತ್ತಿದ್ದಾಗ, ಬಸ್ಸಿನೊಳಗೆ ಒಂದು ಬೃಹತ್ ಹಾವು ಸುರುಳಿ ಸುತ್ತಿಕೊಂಡು ಮಲಗಿರುವುದು ಕಂಡುಬಂದಿದೆ.
ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಾವು ಹಿಡಿಯುವ ತಜ್ಞ ದಿನೇಶ್ ಪಡುಕೊಣಾಜೆ (ಗಡ್ಡ ದಿನೇಶ್) ಮತ್ತು ಅವರ ತಂಡದವರು ಸುರಕ್ಷಿತವಾಗಿ ಹಾವನ್ನು ಹಿಡಿದು ಬಸ್ಸಿನಿಂದ ಹೊರತೆಗೆದರು.
ಬಸ್ಸಿನಲ್ಲಿ ಕುಳಿತಿದ್ದ ನೂತನ ವಧು-ವರರು ಮತ್ತು ಅವರ ಕುಟುಂಬಸ್ಥರು, ಯಾವುದೇ ಅನಾಹುತ ಸಂಭವಿಸುವ ಮೊದಲು ಸಕಾಲಕ್ಕೆ ಬಂದು ಸಹಕರಿಸಿದ ದಿನೇಶ್ ಪಡುಕೊಣಾಜೆ ಮತ್ತು ತಂಡದವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









