ಮಂಗಳೂರು: ನಗರದ ನೆಹರೂ ಮೈದಾನದ ಬಳಿ ಇರುವ ಪ್ರಾದೇಶಿಕ ಸಾರಿಗೆ ಕಚೇರಿ (RTO) ಗೆ ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ ಗಂಭೀರ ಘಟನೆ ನಡೆದಿದೆ. ಕಚೇರಿಯ ಅಧಿಕೃತ ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿದ್ದು, ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಈ ಬೆದರಿಕೆಯ ಇ-ಮೇಲ್ ಸಂದೇಶವು ರವಿವಾರ ರಾತ್ರಿ ವೇಳೆಗೆ RTO ಕಚೇರಿಯ ಮೇಲ್ ಐಡಿಗೆ ಬಂದಿತ್ತು. ಆ ಸಂದೇಶದಲ್ಲಿ, ಮಂಗಳೂರು ನಗರದ ಐದು ಪ್ರಮುಖ ಕಡೆಗಳಲ್ಲಿ ಬಾಂಬ್ ಇಡುವುದಾಗಿ ಕಿಡಿಗೇಡಿಗಳು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಸೋಮವಾರ ಅಪರಾಹ್ನ 12 ಗಂಟೆಯ ಸುಮಾರಿಗೆ RTO ಅಧಿಕಾರಿಗಳು ಈ ಇ-ಮೇಲ್ ಅನ್ನು ಗಮನಿಸಿದ ತಕ್ಷಣ, ಯಾವುದೇ ವಿಳಂಬ ಮಾಡದೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು.
ಮಾಹಿತಿ ತಲುಪುತ್ತಿದ್ದಂತೆ ಮಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು, ಎಎಸ್ಸಿ (ASC) ಮತ್ತು ಬಿಡಿಡಿಎಸ್ (Bomb Detection and Disposal Squad – BDDS) ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿತು. ತಂಡವು ತೀವ್ರ ಪರಿಶೀಲನಾ ಕಾರ್ಯವನ್ನು ಕೈಗೊಂಡು, RTO ಕಚೇರಿ ಆವರಣ ಹಾಗೂ ಇಡೀ ಕಚೇರಿ ಕಟ್ಟಡದಲ್ಲಿ ಬಾಂಬ್ಗಳಿಗಾಗಿ ಶೋಧ ನಡೆಸಿತು. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









