ಸೌಪರ್ಣಿಕ ಹೊಳೆಯಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

2:51 PM, Monday, January 14th, 2013
Share
1 Star2 Stars3 Stars4 Stars5 Stars
(No Ratings Yet)
Loading...

youngsters drown in Sowparnika riverಕುಂದಾಪುರ : ಭಾನುವಾರ ಸೌಪರ್ಣಿಕ ಹೊಳೆಯಲ್ಲಿ ಈಜಲು ತೆರಳಿದ ಒಟ್ಟು ಐವರಲ್ಲಿ ಇಬ್ಬರು ನೀರು ಪಾಲಾದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಹುಂತನಗೋಳಿ ನಿವಾಸಿ ರವಿರಾಜ ಶೆಟ್ಟಿ ಪುತ್ರ ಧನರಾಜ ಶೆಟ್ಟಿ (೧೩), ಹಾಗೂ ಸೀತಾರಾಮ ಶೆಟ್ಟಿ ಅವರ ಪುತ್ರ ಶಿವರಾಜ(೧೯) ಎಂದು ಗುರುತಿಸಲಾಗಿದೆ.

ಕುಂದಾಪುರ ಸಮೀಪ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಂತನಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿನ ಸೌಪರ್ಣಿಕ ಹೊಳೆಯಲ್ಲಿ ಮಧ್ಯಾಹ್ನ 11.30 ರ ಸುಮಾರಿಗೆ ಸ್ನಾನಕ್ಕೆಂದು ತೆರಳಿದ ಒಂದೇ ಕುಟುಂಬದ ಸಂಪನ್ನ(೧೬), ಕಪಿಲ್(೧೪), ಸಚಿನ್(೧೫) , ಧನರಾಜ ಶೆಟ್ಟಿ (೧೩), ಶಿವರಾಜ(೧೯) ಈ ಐವರು ಮಧ್ಯಾಹ್ನ ತೆರಳಿದ್ದು ಈ ಸಂದರ್ಭ ಧನರಾಜ ಶೆಟ್ಟಿ ಹಾಗೂ ಶಿವರಾಜ ಶೆಟ್ಟಿ ನೀರಿನಲ್ಲಿ ಮುಳುಗಲಾರಂಭಿಸಿದ್ದರು. ಇದನ್ನು ಗಮನಿಸಿದ ಉಳಿದ ಮೂವರು ಓಡಿಹೋಗಿ ಸ್ಥಳೀಯರು ಮತ್ತು ಮನೆಯವರಿಗೆ ವಿಷಯ ತಿಳಿಸಿದ್ದು ಮನೆಯವರು ಬರುವಾಗ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಧನರಾಜ ಶೆಟ್ಟಿ ಕುಂದಾಪುರ ವಿ.ಕೆ.ಆರ್. ಆಂಗ್ಲಮಾಧ್ಯಮ ಶಾಲೆಯಲ್ಲಿ ೮ನೇ ತರಗತಿ ಓದುತ್ತಿದ್ದು ಶಿವರಾಜ ಮುರ್ಡೇಶ್ವರದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲಾಮೋ ವ್ಯಾಸಂಗ ಮಾಡುತ್ತಿದ್ದ. ಗಂಗೊಳ್ಳಿ ಠಾಣೆಯ ಉಪನಿರೀಕ್ಷಕ ಸಂಪತ್ ಕುಮಾರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English