ಮಂಗಳೂರು : ನಾಗುರಿಗುಡ್ಡೆ ನಿವಾಸಿ ಜೆರಾಲ್ಡ್ ಪಿಂಟೊ ಅವರ ಪತ್ನಿ ಆನೆಟ್ ಪಿಂಟೊ ಎಂಬುವವರು ನೀರು ಸೇದುತ್ತಿರುವಾಗ ಹಗ್ಗ ತುಂಡಾಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆನೆಟ್ ಪಿಂಟೊ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದ ಅವರು ಪಕ್ಕದಲ್ಲಿದ್ದ ಬಾವಿಯಿಂದ ನೀರು ಸೇದುತ್ತಿರುವಾಗ ಬಾವಿಯ ಹಗ್ಗ ತುಂಡಾಗಿ ಹಗ್ಗದ ಸಮೇತ ಬಾವಿಗೆ ಬಿದ್ದಿದ್ದಾರೆ. ಶಬ್ದ ಕೇಳಿ ಓಡಿ ಬಂದ ಮನೆಯವರು ಬಾವಿಯೊಳಗೆ ಬಿದ್ದ ಆನೆಟ್ ಪಿಂಟೋ ರವರನ್ನು ರಕ್ಷಿಸಲು ಪಕ್ಕದ ಮನೆಯವರ ಸಹಾಯದಿಂದ ಬಾವಿಗೆ ಹಗ್ಗ ಇಳಿಸಿ ರಕ್ಷಿಸಲು ಪ್ರಯತ್ನಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ
ಸುದ್ದಿ ತಿಳಿದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯಿಂದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಗೆ ಇಳಿದು ಆನೆಟ್ ಅವರನ್ನು ಮೇಲೆತ್ತುವರಷ್ಟಲ್ಲಿ ಅವರು ಮೃತಪಟ್ಟಿದ್ದರು. ಮೃತರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English