ಇಂದಿನ ಯುಗದಲ್ಲಿ ಟೆಕ್ನಾಲಜಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮೊಬೈಲ್, ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI) ಮುಂತಾದ ಸಾಧನಗಳು ನಮ್ಮ ಕೆಲಸವನ್ನು ಸುಲಭಗೊಳಿಸಿವೆ. ಆದರೆ “ಉತ್ತಮ ಟೆಕ್ನಾಲಜಿ” ಮನುಷ್ಯನ ತಲೆ ಖರ್ಚು ಮಾಡಿಸುತ್ತಿದೆಯೇ ಎಂಬ ಪ್ರಶ್ನೆ ಕೂಡ ಉದಯಿಸುತ್ತದೆ.
ಹಿಂದೆ ಜನರು ಲೆಕ್ಕ ಹಾಕಲು, ನೆನಪಿಡಲು, ವಿಚಾರಿಸಲು ಹೆಚ್ಚು ಸಮಯ ಮತ್ತು ಮೆದುಳಿನ ಶ್ರಮ ಬಳಸುತ್ತಿದ್ದರು. ಈಗ ಸ್ಮಾರ್ಟ್ಫೋನ್ ಒಂದೇ ಸಾಕು
ಲೆಕ್ಕದಿಂದ ಹಿಡಿದು ದಾರಿ ಹುಡುಕುವವರೆಗೂ ಎಲ್ಲವೂ ಸಿಗುತ್ತದೆ. ಇದರಿಂದ ನಮ್ಮ ಚಿಂತನಾ ಶಕ್ತಿ ಮತ್ತು ನೆನಪಿನ ಸಾಮರ್ಥ್ಯ ಕಡಿಮೆಯಾಗುವ ಭೀತಿ ಇದೆ.
ಆದರೆ ಟೆಕ್ನಾಲಜಿ ಸ್ವತಃ ಕೆಟ್ಟದು ಅಲ್ಲ. ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ಮುಖ್ಯ. ಜ್ಞಾನ ವೃದ್ಧಿಗೆ, ಸಂಶೋಧನೆಗೆ, ಶಿಕ್ಷಣಕ್ಕೆ ಬಳಸಿದರೆ ಅದು ಮಾನವ ಅಭಿವೃದ್ಧಿಗೆ ಸಹಾಯಕ. ಆದರೆ ಅತಿಯಾಗಿ ಅವಲಂಬಿಸಿದರೆ ಮನುಷ್ಯನ ಸ್ವಂತ ಚಿಂತನೆ ಮತ್ತು ಸೃಜನಶೀಲತೆ ಕುಂಠಿತವಾಗಬಹುದು.
ಹೀಗಾಗಿ, ಉತ್ತಮ ಟೆಕ್ನಾಲಜಿಯನ್ನು ಬಳಸುವುದು ತಪ್ಪಲ್ಲ. ಆದರೆ ಅದು ನಮ್ಮ ಮೆದುಳಿಗೆ ಬದಲಿ ಆಗಬಾರದು ಸಹಾಯಕ ಸಾಧನವಾಗಿರಬೇಕು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವಿಶೇಷ ಸುದ್ದಿಗಳು, ಸುದ್ದಿಗಳು









