ಮಂಗಳೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿ ಪದ್ಧತಿಯಲ್ಲಿ ಆದಿದ್ರಾವಿಡ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಮುಖಂಡ ಅನಿಲ್ ಕುಮಾರ್ ಕಂಕನಾಡಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಹೊಸ ವರ್ಗೀಕರಣ ಕ್ರಮದಲ್ಲಿ ದೋಷಗಳಿದ್ದು, ಕೂಡಲೇ ಸಮುದಾಯದ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು. ದಶಕಗಳಿಂದ ಸರ್ಕಾರವೇ ನೀಡುತ್ತಿರುವ ಜಾತಿ ಪ್ರಮಾಣಪತ್ರಗಳ ಬಗ್ಗೆ ಗೊಂದಲ ಸೃಷ್ಟಿಸಿರುವುದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಮುದಾಯದ ಶೇ. 90ರಷ್ಟು ಮಂದಿ ಇಂದಿಗೂ ಕೃಷಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಪ್ರಸ್ತುತ ಈ ಸಮುದಾಯವನ್ನು ‘ಬಲಗೈ’ ಗುಂಪಿಗೆ ಸೇರಿಸಲಾಗಿದ್ದರೂ, ಈ ಗುಂಪಿನಲ್ಲಿರುವ ಇತರ ಪ್ರಭಾವಿ ಸಮುದಾಯಗಳ ನಡುವೆ ಆದಿದ್ರಾವಿಡರಿಗೆ ಮೀಸಲಾತಿಯ ನೈಜ ಪಾಲು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಸಮುದಾಯದ ಆರಾಧ್ಯ ದೈವ ‘ಶ್ರೀ ಕಾನದ ಕಟದ’ ಅವರ ಹೆಸರಿನಲ್ಲಿ ‘ಸಾರಮಣಿ ಸಮಾಜ’ ಎಂದು ಪ್ರತ್ಯೇಕ ಉಪಜಾತಿಯಾಗಿ ಗುರುತಿಸಿ, ಶೇ. 2 ರಷ್ಟು ಒಳಮೀಸಲಾತಿಯನ್ನು ನೀಡಬೇಕು ಎಂದು ಅವರು ಸರ್ಕಾರಕ್ಕೆ ಆಗ್ರಹ ಸಲ್ಲಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









