ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಓಕುಳಿಯಾಟದಲ್ಲಿ ಸಂಭ್ರಮದಿಂದ ಪಾಲ್ಗೊಂಡ ಭಕ್ತ ಸಮೂಹ

3:43 PM, Monday, February 18th, 2013
Share
1 Star2 Stars3 Stars4 Stars5 Stars
(No Ratings Yet)
Loading...

Okuli celebrated at  Venkatramana Tಮಂಗಳೂರು : ವಿವಿಧ ಧಾರ್ಮಿಕ ವಿದಿವಿಧಾನಗಳೊಂದಿಗೆ ಐದು ದಿನಗಳ ಕಾಲ ನಡೆದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆರನೆಯ ದಿನವಾದ ಇಂದು ನಡೆದ ಓಕುಳಿ ಕಾರ್ಯಕ್ರಮದಲ್ಲಿ ಪುರುಷರು ಮಕ್ಕಳು, ಮಹಿಳೆಯರೆನ್ನದೆ ನೂರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ವರ್ಷಂಪ್ರತಿ ಆರನೇ ದಿನ ನಡೆಯುವ ಈ ಓಕುಳಿಯಾಟದಲ್ಲಿ ನಗರದಿಂದ ಮಾತ್ರವಲ್ಲದೆ  ರಾಜ್ಯದಾದ್ಯಂತ ಆಗಮಿಸಿದ ಭಕ್ತರು  ಯಾವುದೇ ರೀತಿಯ ಧರ್ಮ ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವ ದಿನವಾಗಿದೆ. ಬೆಳಿಗ್ಗೆ ಸುಮಾರು 10 ಗಂಟೆಗೆ ಪ್ರಾರಂಭವಾದ ಓಕುಳಿಯಾಟ ದಲ್ಲಿ  ಕೆಲವರು ಪರಸ್ಪರ ಬಣ್ಣದ ಹುಡಿಗಳನ್ನು ಎರಚಿದರೆ ಇನ್ನು ಕೆಲವರು ಸ್ಪ್ರೇಯರ್ ಗಳಲ್ಲಿ ಬಣ್ಣದ ನೀರನ್ನು ತುಂಬಿಸಿ ಸಿಂಪಡಿಸುವ ದೃಶ್ಯ ಕಂಡುಬಂದಿತು.

ಐದು ದಿನಗಳ ಕಾಲ ನಡೆದ ವಿವಿಧ ಪೂಜೆ ಪುನಸ್ಕಾರಗಳಲ್ಲಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸುವ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಮಾಡಿರುವ ಕೆಲಸ ಕಾರ್ಯಗಳಿಂದಾದ ದಣಿವನ್ನು ಈ ಓಕುಳಿಯಾಟವನ್ನು ಆಡುವುದರ ಮೂಲಕ ತಮ್ಮ ದಣಿವನ್ನು ನಿವಾರಿಸಿಕೊಳ್ಳುತ್ತಾರೆ.  ಧರ್ಮ ಭೇದವಿಲ್ಲದೆ ಆಡುವ ಈ ಓಕುಲಳಿಯಾಟವು  ಪರಸ್ಪರರ ನಡುವೆ ಸಾಮರಸ್ಯವನ್ನು ಮೂಡಿಸುವಂತ ದಿನವಾಗಿದೆ. ವಿವಿಧೆಡೆಗಳಿಂದ ಸಾವಿರಾರು ಭಕ್ತರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಈ ದಿನ  ಆಗಮಿಸುತ್ತಾರೆ ಹಾಗೂ ಓಕುಳಿಯಾಟದಲ್ಲಿ ಸಂಭ್ರಮಿಸುತ್ತಾರೆ. ಯುವಕರಿಗಂತೂ ಈ ದಿನ ಬಹಳಷ್ಟು ಸಂಭ್ರಮದ ದಿನವಾಗಿದ್ದು. ಕೆಲವು ಸಂಘ ಸಂಸ್ಥೆಗಳು ನೀರಿನ ಟ್ಯಾಂಕರ್ ಗಳಲ್ಲಿ ಬಣ್ಣದ ನೀರನ್ನು ತುಂಬಿಸಿ ಪೈಪಿನ ಮೂಲಕ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದವರ ಮೇಲೆ ಸಿಂಪಡಿಸುತ್ತಿದ್ದ ದೃಶ್ಯ ಕಂಡುಬಂದಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English