ಮಂಗಳೂರು : ಮಾಡೂರು ಜಂಕ್ಷನ್ ನಿವಾಸಿ ಎಂ.ಯು.ಅಬ್ಬಾಸ್ ಅವರ ಪುತ್ರ ಮಹಮ್ಮದ್ ಸಲೀಂ ಎಂಬಾತ ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಈತ ಮೂರು ತಿಂಗಳ ಹಿಂದೆಷ್ಟೇ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ. ಕಮೀಸ್ ಮಿಶೀಯತ್ ನಗರದಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸದಲ್ಲಿದ್ದ ಈತನಿಗೆ ಶುಕ್ರವಾರ ಕೆಲಸಕ್ಕೆ ರಜೆಯಿತ್ತು ಆದ ಕಾರಣ ಮೊನ್ನೆ ರಾತ್ರಿ ನಝ್ರಾನ್ ಎಂಬಲ್ಲಿ ಕ್ರಿಕೆಟ್ ಆಡಲೆಂದು ತನ್ನ ಸ್ನೇಹಿತರಾದ ಮಾಡೂರಿನ ಇಮ್ರಾನ್, ಸಲ್ಮಾನ್ ಮತ್ತು ಇನ್ನೋರ್ವ ಕೇರಳ ಮೂಲದ ಸ್ನೇಹಿತನ ಜೊತೆ ಕಾರಿನಲ್ಲಿ ತೆರಳಿದ್ದಾನೆ.
ಕಮೀಸ್ ಮಿಶೀಯತ್ ನಿಂದ ೭೫ ಕಿ.ಮೀ. ದೂರದಲ್ಲಿರುವ ಫ್ಲೈ ಓವರ್‌ನಲ್ಲಿ ಕಾರು ಸಂಚರಿಸುತ್ತಿದ್ದ ಸಂದರ್ಭ ಎದುರಿನಿಂದ ಹೋಗುತ್ತಿದ್ದ ಕಾರು ನಿಧಾನ ವಾದ ಕಾರಣ ಸಲೀಂ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಬ್ರೇಕ್ ಹಾಕಿದ್ದಾನೆ ಪರಿಣಾಮ ಸ್ಕಿಡ್ ಆಗಿ ನಿಯಂತ್ರಣ ಕಳೆದುಕೊಂಡ ಕಾರು ಫ್ಲೈಓವರ್‌ನಿಂದ ಕೆಳಗೆ ಬಿದ್ದಿದ್ದು, ಸಲೀಂ ನ ತಲೆಗೆ ಗಂಭೀರವಾದ ಗಾಯವಾದ ಕಾರಣ ಸಲೀಂ ಮೃತಪಟ್ಟಿದ್ದಾನೆ. ಉಳಿದಂತೆ ಇನ್ನುಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ.
ಮಹಮ್ಮದ್ ಸಲೀಂ ನ ಮೃತದೇಹವನ್ನು ಮಾಡೂರಿಗೆ ತರಲು ಎರಡು ವಾರಗಳು ಬೇಕಾಗಿರುವ ಕಾರಣ ಅಲ್ಲೇ ದಫನ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English