ಉಡುಪಿ : ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜಾಲು ಎಂಬಲ್ಲಿ ಪ್ರಕೃತಿಯ ಕ್ರೂರ ಆಟಕ್ಕೆ ಹಸುಗೂಸೊಂದು ಬಲಿಯಾಗಿದೆ. ಪ್ರಶಾಂತ್ ಹಾಗೂ ಸುಚಿತ್ರಾ ದಂಪತಿಯ ಒಂದೂವರೆ ವರ್ಷದ ಗಂಡು ಮಗು ತಾಯಿಯ ಕಂಕುಳಲ್ಲೇ ಆಟವಾಡುತ್ತಿದ್ದ ಸಂದರ್ಭದಲ್ಲಿ, ತೆಂಗಿನಮರದಿಂದ ಆಕಸ್ಮಿಕವಾಗಿ ಬಿದ್ದ ತೆಂಗಿನಕಾಯಿಯೊಂದು ನೇರವಾಗಿ ಮಗುವಿನ ತಲೆಗೆ ಅಪ್ಪಳಿಸಿದೆ. ಈ ಘೋರ ಅಪಘಾತದಿಂದಾಗಿ ಮಗುವಿನ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಕಂದಮ್ಮನನ್ನು ತಕ್ಷಣವೇ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಸಾಗಿಸಿ, ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಗಂಭೀರ ಗಾಯ ಹಾಗೂ ವಿಪರೀತ ರಕ್ತಸ್ರಾವದಿಂದಾಗಿ ಚಿಕಿತ್ಸೆಗೆ ಸ್ಪಂದಿಸದ ಪುಟಾಣಿ ಮಗು ಗುರುವಾರದಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದು, ಹೆತ್ತವರ ಒಡಲು ಸೀಳುವಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









