ಕಾಸರಗೋಡು : ಐತಿಹಾಸಿಕ ಬೇಕಲ ಕೋಟೆಯ ಸೌಂದರ್ಯವನ್ನು ಸವಿಯಲು ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ತಂಡವೊಂದು ಭಾನುವಾರ ಸಂಜೆ ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಭೀಕರ ದುರಂತಕ್ಕೀಡಾಗಿದೆ. ಕಾಸರಗೋಡಿನ ಪಳ್ಳಿಕೆರೆ ಕಡಲತೀರದಲ್ಲಿ ಸಮುದ್ರಕ್ಕಿಳಿದಿದ್ದ ಕೊಟ್ಟಾಯಂ ಜಿಲ್ಲೆಯ ಚಂಗನಾಶೇರಿ ಮೂಲದ ಅಂಕಿತ್ (20) ಹಾಗೂ ಅಪ್ಪು ಟಿ. ಅಬ್ರಹಾಂ (20) ಎಂಬ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ. ಅವರೊಂದಿಗೆ ಜಲಸಮಾಧಿಯಾಗುತ್ತಿದ್ದ ಇನ್ನುಳಿದ ಇಬ್ಬರು ಸಹಪಾಠಿಗಳನ್ನು ಸ್ಥಳೀಯರ ನೆರವಿನಿಂದ ಸಮಯಪ್ರಜ್ಞೆಯಿಂದ ರಕ್ಷಿಸಲಾಗಿದೆ.
ಕೊಟ್ಟಾಯಂನಿಂದ ಒಟ್ಟು ಆರು ಮಂದಿ ಯುವಕರ ತಂಡವು ಬೇಕಲ ಕೋಟೆ ವೀಕ್ಷಣೆಗೆಂದು ಆಗಮಿಸಿದ್ದು, ಭಾನುವಾರ ಸಂಜೆ ಸುಮಾರು 6:30ರ ಸುಮಾರಿಗೆ ಇವರಲ್ಲಿ ನಾಲ್ವರು ಪಳ್ಳಿಕೆರೆ ಬೀಚ್ನಲ್ಲಿ ಸಮುದ್ರಕ್ಕಿಳಿದಿದ್ದಾರೆ. ಈ ವೇಳೆ ಕಡಲಿನ ಭೀಕರ ಅಲೆಗಳು ಇವರನ್ನು ಒಳಗಿಳಿಸಿಕೊಂಡಿದ್ದು, ಇಬ್ಬರು ನಾಪತ್ತೆಯಾಗಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ಪಡೆ, ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಡರಾತ್ರಿಯವರೆಗೂ ತೀವ್ರ ಶೋಧ ಕಾರ್ಯಾಚರಣೆ ನಡೆಸಿ, ಕೊನೆಗೂ ಮೃತದೇಹಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆಹ್ಲಾದಕರವಾಗಿದ್ದ ಪ್ರವಾಸವು ಕ್ಷಣಾರ್ಧದಲ್ಲಿ ಹೆತ್ತವರಿಗೆ ಮಗುವಿನ ಶೋಕ ತಂದಿಟ್ಟಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









