ಕಾಸರಗೋಡು : ಸುದೀರ್ಘ ಕಾಲ ಸೇವೆ ಸಲ್ಲಿಸಿ, ಹಲವು ಕಠಿಣ ಮತ್ತು ಪ್ರಮುಖ ಕೇಸ್ಗಳನ್ನು ಭೇದಿಸಿ ದಕ್ಷ ತನಿಖಾಧಿಕಾರಿ ಎನಿಸಿಕೊಂಡಿದ್ದ ನಿವೃತ್ತ ಸಬ್ ಇನ್ಸ್ಪೆಕ್ಟರ್ ಧನ್ ರಾಜ್ (65) ಅವರು ಸೋಮವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಕಣ್ಣೂರಿನವರಾದ ಮುರಳೀಧರನ್ ಅವರ ಪುತ್ರ ಧನ್ರಾಜ್, ಪೊಲೀಸ್ ಇಲಾಖೆಯಿಂದ ನಿವೃತ್ತರಾದ ಬಳಿಕ ಕಾಸರಗೋಡಿನ ಪಾರಕಟ್ಟೆಯಲ್ಲಿ ಹೊಸ ಮನೆ ನಿರ್ಮಿಸಿ ನೆಲೆಸಿದ್ದರು. ಸೋಮವಾರ ಬೆಳಿಗ್ಗೆ ಮನೆಯ ಕೊಠಡಿಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ತಪಾಸಣೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಧನ್ರಾಜ್ ಅವರು ಕಾಸರಗೋಡು ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿ, ತಮ್ಮ ಚಾಣಾಕ್ಷ ತನಿಖಾ ವೈಖರಿಯಿಂದ ಇಲಾಖೆಯಲ್ಲಿ ಉನ್ನತ ಹೆಸರು ಪಡೆದಿದ್ದರು. ಕಾಸರಗೋಡು ಕ್ರೈಮ್ ಬ್ರಾಂಚ್ನ ಅಧಿಕಾರಿಯಾಗಿ ಸೇವೆಯಲ್ಲಿದ್ದಾಗ ನಿವೃತ್ತಿ ಹೊಂದಿದ್ದ ಅವರು, ಬಳಿಕ ಚೆರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳುಗಳಿಂದ ಆರೋಗ್ಯ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಆ ಕೆಲಸವನ್ನೂ ತೊರೆದಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










