ಮೂಡುಬಿದಿರೆ : ಸರ್ಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆಯಲ್ಲಿದ್ದು, ನೂರಾರು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ (ಪೋಸ್ಟ್ ಮಾರ್ಟಮ್) ನೆರವಾಗಿ ನಿವೃತ್ತರಾಗಿದ್ದ ಎಲ್ಲರ ಪ್ರೀತಿಯ ಜಗ್ಗಣ್ಣ (ಜಗದೀಶ್) ಅವರು ಶನಿವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೂಲತಃ ಕಾಸರಗೋಡಿನವರಾದ ಇವರು ಮೂಡುಬಿದಿರೆ ಆಸ್ಪತ್ರೆಯಲ್ಲಿ ನಿಷ್ಠಾವಂತ ಸೇವೆಯನ್ನು ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರೋಗಿಗಳ ಗಾಯಗಳನ್ನು ಶುಚಿಗೊಳಿಸುತ್ತಿದ್ದ ಹಾಗೂ ಪೋಸ್ಟ್ ಮಾರ್ಟಮ್ಗೆ ಬೇಕಾಗುವ ಸಾಮಗ್ರಿಗಳನ್ನು ಸ್ವತಃ ತ ತಂದು ಮೃತರ ಕುಟುಂಬಸ್ಥರಿಂದ ಹಣ ಪಡೆಯದೆ ಉಚಿತ ಸೇವೆ ಸಲ್ಲಿಸುತ್ತಿದ್ದ ಅವರ ಮಾನವೀಯ ಗುಣವನ್ನು ಹಲವು ಸಂಘ-ಸಂಸ್ಥೆಗಳು ಗೌರವಿಸಿ ಸನ್ಮಾನಿಸಿದ್ದವು. ‘ಪೋಸ್ಟ್ ಮಾರ್ಟಮ್ ಜಗ್ಗಣ್ಣ’ ಎಂದೇ ಚಿರಪರಿಚಿತರಾಗಿದ್ದ ಇವರು ಪತ್ನಿ ಭೋಜಮ್ಮ, ಪುತ್ರಿ ಮಧುರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









