ಪುತ್ತೂರು : ಪುತ್ತೂರು ನಗರದ ಹೃದಯಭಾಗದಲ್ಲಿರುವ ದರ್ಬೆ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ದಿಢೀರನೆ ಎರಡು ಕಾಡುಕೋಣಗಳು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಗೆ ಒಳಪಡುವ ದುಗ್ಗಮ್ಮ-ದೇರಣ್ಣ ಶೆಟ್ಟಿ ಸಭಾಂಗಣದ ಸಮೀಪ ಈ ಕಾಡುಪ್ರಾಣಿಗಳು ಸಂಚರಿಸುತ್ತಿರುವುದು ಕಂಡುಬಂದಿದ್ದು, ಬೆಳಗಿನ ವೇಳೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಹಾಗೂ ಹಾಲಿನ ಡೈರಿ ಸಿಬ್ಬಂದಿ, ಪತ್ರಿಕೆ ವಿತರಕರು ಮತ್ತು ವಾಕಿಂಗ್ ನಿರತರನ್ನು ಕ್ಷಣಕಾಲ ಬೆಚ್ಚಿಬೀಳಿಸಿತು.
ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಿಗೆ ಸೀಮಿತವಾಗಿದ್ದ ಕಾಡುಕೋಣಗಳು ನಗರದ ಜನನಿಬಿಡ ವಸತಿ ಹಾಗೂ ವಾಣಿಜ್ಯ ವಲಯಕ್ಕೆ ಎಂಟ್ರಿ ಕೊಟ್ಟಿರುವುದು ಸ್ಥಳೀಯ ನಿವಾಸಿಗಳಲ್ಲಿ ಹೊಸ ಭೀತಿಯನ್ನು ಹುಟ್ಟುಹಾಕಿದೆ. ಆಹಾರ ಮತ್ತು ನೀರಿನ ಅಭಾವದಿಂದ ದಾರಿ ತಪ್ಪಿದ ಈ ಪ್ರಾಣಿಗಳು ಸಮೀಪದ ಕಾಡಿನಿಂದ ನಗರ ಭಾಗಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಡುಕೋಣಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಅಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರಿನ ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









