
ಮಂಗಳೂರು : ನವರಾತ್ರಿ ಮಹೋತ್ಸವದ ಸಂಭ್ರಮದ ನಡುವೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಪ್ರಮುಖ ನಾಯಕ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ರಾತ್ರಿಯ ವೇಳೆ ಭೇಟಿ ನೀಡಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ದೇವಿಯ ಸನ್ನಿಧಿಗೆ ಆಗಮಿಸಿದ ಅವರು ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿ ತಾಯಿಯ ಕೃಪಾಶಯಕ್ಕೆ ಪಾತ್ರರಾದರು.
ಈ ಧಾರ್ಮಿಕ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಧಾನ ಅರ್ಚಕರು ಹಾಗೂ ಸ್ಥಳೀಯ ಭಕ್ತವೃಂದದವರು ಸಿಎಂ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕ್ಷೇತ್ರದ ವತಿಯಿಂದ ಅವರಿಗೆ ಗೌರವಪೂರ್ವಕ ಸ್ವಾಗತ ಕೋರಲಾಗಿದ್ದು, ಪೂಜೆಯ ಬಳಿಕ ದೇವಿಯ ಪ್ರಸಾದವನ್ನು ನೀಡಿ ಗೌರವಿಸಲಾಯಿತು. ಅಲ್ಲದೆ, ಅವರ ಮುಂದಿನ ಜನಪರ ಕಾರ್ಯಗಳು ಹಾಗೂ ರಾಜಕೀಯಯ ಯಶಸ್ಸಿಗೆ ಎಲ್ಲರೂ ಶುಭ ಹಾರೈಸಿದರು.
ಈ ಭೇಟಿಯ ವೇಳೆ ಕಾಂಗ್ರೆಸ್ ಪಕ್ಷದ ಪ್ರಮುಖ ಗಣ್ಯರು ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದು ಸಾಥ್ ನೀಡಿದರು. ಸಚಿವರು ಹಾಗೂ ಶಾಸಕರಾದ ಯು.ಟಿ. ಖಾದರ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಯುವ ನಾಯಕ ಮಿಥುನ್ ರೈ, ಪದ್ಮರಾಜ್ ಆರ್. ಪೂಜಾರಿ, ಸಂತೋಷ್ ಶೆಟ್ಟಿ ಹಾಗೂ ರಾಮಾನಂದ ಪೂಜಾರಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









