ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಪ್ರೀತಿಯ ಪತ್ನಿ ಉಷಾಕುಮಾರಿ (56) ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.
ಮೃತರಾದ ಉಷಾಕುಮಾರಿ ಅವರು ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದರು. ನಗರದ ಪ್ರತಿಷ್ಠಿತ ಉರ್ವ ಸೇಂಟ್ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಸುಮಾರು ಇಪ್ಪತ್ತಾರು ವರ್ಷಗಳಿಗೂ ಅಧಿಕ ಕಾಲ ಶಿಕ್ಷಕಿಯಾಗಿ ಸೇವೆಗೈದು ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶಿಕ್ಷಕ ವೃತ್ತಿಯ ಆರಂಭಿಕ ದಿನಗಳಲ್ಲಿ ಅವರು ಮಂಗಳೂರಿನ ಚಿನ್ಮಯ ಪ್ರೌಢಶಾಲೆ ಹಾಗೂ ಉಳ್ಳಾಲದ ಭಾರತ್ ಪ್ರೌಢಶಾಲೆಯಲ್ಲಿಯೂ ಸಹ ಕೆಲವು ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಹಾಗೂ ಸಹೋದ್ಯೋಗಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಮೃತರ ಅಗಲಿಕೆಯಿಂದ ಕುಟುಂಬ ವರ್ಗಕ್ಕೆ ತೀವ್ರ ನೋವುಂಟಾಗಿದ್ದು, ಅವರು ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಹಾಗೂ ಅಗಣಿತ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನವು ಭಾನುವಾರ (ಅ.25) ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಅವರ ಸ್ವಗೃಹ ವಿನಾಯಕ ಅಪಾರ್ಟ್ಮೆಂಟ್, ಡೋರ್ ನಂಬರ್ 102, ಕರಾವಳಿ ಉತ್ಸವ ಮೈದಾನದ ಮುಂಭಾಗದ ರಸ್ತೆ, ಹ್ಯಾಟ್ ಹಿಲ್, ಮಂಗಳೂರು ಇಲ್ಲಿ ನಡೆಯಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









