ಉಪ್ಪಿನಂಗಡಿ : ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಕೃಷಿಕ ಮೃತಪಟ್ಟ ಘಟನೆ ಶನಿವಾರ ರೆಖ್ಯಾ ಗ್ರಾಮದ ಪರ್ಕಳ ಎಂಬಲ್ಲಿ ನಡೆದಿದೆ.
ಮೃತರನ್ನು ಅರಸಿನಮಕ್ಕಿ ಗ್ರಾಮದ ಉಡ್ಯೆರೆ ಮನೆ ನಿವಾಸಿ ಕೃಷ್ಣಪ್ಪ ಕುಲಾಲ್ (49) ಎಂದು ಗುರುತಿಸಲಾಗಿದೆ.
ಪರ್ಕಳದ ತೋಟದಲ್ಲಿ ಅಡಕೆ ಕೃಷಿಗೆ ಔಷಧಿ ಸಿಂಪಡಿಸುವಾಗ ಬಳಸಿದ ದೋಟಿಯು ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಸಿಲುಕಿದರು. ತಕ್ಷಣವೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತ್ತಾದರೂ, ಅವರಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದರು. ಮೃತ ಕೃಷ್ಣಪ್ಪ ಕುಲಾಲ್ ಅರಸಿನಮಕ್ಕಿ ಕುಲಾಲರ ಸಮಾಜಸೇವಾ ಸಂಘದ ಮಾಜಿ ಅಧ್ಯಕ್ಷರಾಗಿಯೂ, ಪ್ರಸಕ್ತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









