ಬೆಂಗಳೂರು : ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ. ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ಜೊತೆ ಅನುಶ್ರೀ ಮದುವೆ ನಡೆಯಲಿದೆ. ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ಮದುವೆ ನಡೆಯಲಿದೆ.
“ಈ ಬಾರಿ ನಾನು ಮದುವೆ ಆಗ್ತೀನಿ, ಈ ವರ್ಷವೇ ಮದುವೆ ನಡೆಯುತ್ತದೆ” ಎಂದು ಅನುಶ್ರೀ ಅವರು ʼಸರಿಗಮಪʼ ಸೇರಿದಂತೆ ʼಮಹಾನಟಿʼ ಶೋನಲ್ಲಿ ಸಾಕಷ್ಟು ಬಾರಿ ಹೇಳಿದ್ದರು. ಅದೀಗ ನಿಜವಾಗ್ತಿದೆ. ಈ ಬಗ್ಗೆ ಅನುಶ್ರೀ ಅವರು ಅಧಿಕೃತ ಹೇಳಿಕೆ ನೀಡಬೇಕಿದೆ. ಅಂದಹಾಗೆ ಅನುಶ್ರೀ ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿದ್ದರು. ಅನುಶ್ರೀ ಅವರು ಮಂಗಳೂರಿನವರಾಗಿದ್ದು, ಆ ಬಳಿಕ ದುಡಿಯಲು ಆರಂಭಿಸಿದರು. ಈಗ ಇಡೀ ಕುಟುಂಬದ ಜವಾಬ್ದಾರಿಯನ್ನು ಅವರೇ ಹೊತ್ತಿಕೊಂಡಿದ್ದಾರೆ.
ರಿಯಾಲಿಟಿ ಶೋ ಇರಲೀ, ಸಿನಿಮಾ ಕಾರ್ಯಕ್ರಮವಿರಲೀ ಎಲ್ಲರೂ ಅನುಶ್ರೀಗೆ ಮದುವೆ ಯಾವಾಗ ಅಂತ ಪ್ರಶ್ನೆ ಮಾಡುವವರೇ. ಆಗೆಲ್ಲ ಅನುಶ್ರೀ ಒಂದಲ್ಲ ಒಂದು ಉತ್ತರ ಕೊಡುತ್ತಿದ್ದರು. ಯಾವುದೇ ವೇದಿಕೆಯಿದ್ದರೂ ಪಟ ಪಟ ಅಂತ ಮಾತನಾಡುವ ಅನುಶ್ರೀ ಅವರು, ಕಾಮಿಡಿ ಸೃಷ್ಟಿ ಮಾಡುತ್ತಾರೆ. ಕನ್ನಡ ಕಿರುತೆರೆಯಲ್ಲಿ ನಂ 1 ಆಂಕರ್ ಆಗಿರುವ ಅನುಶ್ರೀ ಅವರು ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.
ಇಲ್ಲಿಯವರೆಗೆ ಸಾಕಷ್ಟು ರಿಯಾಲಿಟಿ ಶೋಗಳ ನಿರೂಪಣೆ ಮಾಡಿರುವ ಅನುಶ್ರೀ ಸಾವಿರಾರು ಇವೆಂಟ್ಗಳ ನಿರೂಪಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾದಲ್ಲಿಯೂ ಹೀರೋಯಿನ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ʼಉಪ್ಪು ಹುಳಿ ಖಾರʼ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.
ಬಿಗ್ ಬಾಸ್ ಕನ್ನಡ, ಡ್ಯಾನ್ಸ್ ಶೋನಲ್ಲಿಯೂ ಅನುಶ್ರೀ ಅವರು ಭಾಗವಹಿಸಿದ್ದರು.









