ಮೊರಾದಾಬಾದ್ : ಉತ್ತರ ಪ್ರದೇಶದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕರನ್ನು ಮದುವೆಯಾಗಿರುವ ಬಗ್ಗೆ ವರದಿಯಾಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ಯುವತಿಯರಾದ ಸ್ವಲೆಹೀನ್ ಮತ್ತು ನೂರ್ ಫಾತಿಮಾ ಎಂಬ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ತಮ್ಮ ಹೆಸರನ್ನು ಶಾಲಿನಿ ಮತ್ತು ನೀಲಂ ಎಂದು ಬದಲಿಸಿಕೊಂಡಿದ್ದಾರೆ.
ಅಲ್ಲದೆ ಈ ಇಬ್ಬರು ಯುವತಿಯರು ಹಿಂದೂ ಧರ್ಮಕ್ಕೆ ಸೇರಿದ ಅಮಿತ್ ಮತ್ತು ಗೌರವ್ ಎಂಬ ಯುವಕರನ್ನು ಮೊರಾದಾಬಾದ್ ನ ಆರ್ಯ ಸಮಾಜ್ ದೇಗುಲದಲ್ಲಿ ವಿವಾಹವಾಗಿದ್ದಾರೆ.
ಇನ್ನು ಮುಸ್ಲಿಂ ಧರ್ಮಕ್ಕೆ ಸೇರಿದ್ದ ಯುವತಿಯರು ಹಿಂದೂ ಧರ್ಮಕ್ಕೆ ಬದಲಾಗದಂತೆ ಸಮುದಾಯದ ಹಿರಿಯರು ಮತ್ತು ನಾಯಕರ ಒತ್ತಡ ಮತ್ತು ಬೆದರಿಕೆಗಳ ನಡುವೆಯೂ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ವಿಶೇಷ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅರ್ಚಕರು ಯುವತಿಯರನ್ನು ಶುದ್ದೀಕರಣಗೊಳಿಸಿ ಮದುವೆ ಕಾರ್ಯ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಹೊಸ ಸುದ್ದಿಗಳು, ಸುದ್ದಿಗಳು









