
ಮಂಗಳೂರು : ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಕಾರ್ಗಿಲ್ ನಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಕಾರ್ಗಿಲ್ ವಿಜಯ ದಿವಸ್ ಭಾರತೀಯ ಸೈನಿಕರ ವಿಜಯಗಾಥೆ ನೆನಪಿಸುವ ದಿನ, “ಭಾರತದ ಸೈನಿಕ ಶಕ್ತಿಯು ಇತಿಹಾಸದಲ್ಲಿ ಯಾವತ್ತೂ ಹೆಮ್ಮೆಪಡುವಂತಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಸೈನ್ಯಕ್ಕೆ ಸಾಂಸ್ಥಿಕ ಬಲವರ್ಧನೆ, ಗೌರವ ಮತ್ತು ಹೊಸ ತಂತ್ರಜ್ಞಾನವನ್ನು ನೀಡಲಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ಮರಿಸಿದರು.
“ಯಾರಾದರೂ ತೀರ್ಥಯಾತ್ರೆ ಹೋಗಬೇಕೆಂದು ಆಸೆಪಟ್ಟರೆ ಅವರು ಕಾರ್ಗಿಲ್ಗೆ ಭೇಟಿ ನೀಡಲಿ” ಎಂದು ಜನರಲ್ ವಿ.ಪಿ. ಮಲ್ಲಿಕ್ ಅವರು ಹೇಳಿದ್ದನ್ನು ಸ್ಮರಿಸಿದರು. ಅದು ಯೋಧರ ಬಲಿದಾನದ ಪವಿತ್ರ ಧಾಮ, ಎಂದು ಉಲ್ಲೇಖಿಸಿದರು. ಶತ್ರುಗಳು ಬೆಟ್ಟದ ಮೇಲಿನಿಂದ ಗುಂಡು ಹಾರಿಸುತ್ತಿದ್ದ ಪರಿಸ್ಥಿತಿಯಲ್ಲಿ, ನಮ್ಮ ಯೋಧರು ಶೌರ್ಯದಿಂದ ಹೋರಾಡಿ ಪರ್ವತಾರೋಹಣದಂತಹ ಕ್ಲಿಷ್ಟ ಯುದ್ದವನ್ನು ಮಾಡಿ ವಿಜಯವನ್ನು ಸಾಧಿಸಿದರು. “ಈ ಬಲಿದಾನ ನೀಡಿದವರಲ್ಲಿ ಬಹುತೇಕ ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಶೂರರು,” ಎಂದು ಸ್ಮರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಈ ಸಂಧರ್ಭ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೂವರು ನಿವೃತ್ತ ಯೋಧರಾದ ಹವಾಲ್ದಾರ್ ಅಂಬ್ರೋಸ್ ಡಿಸಿಲ್ವಾ, ಹವಾಲ್ದಾರ್ ವಿಶ್ವನಾಥ ಶೆಣೈ, ಹವಾಲ್ದಾರ್ ರವಿರಾಮ್ ಶೆಟ್ಟಿ, ಗೌರವಪೂರ್ವಕವಾಗಿ ಸನ್ಮಾನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಕೋಷ್ಟಗಳ ಸಂಯೋಜಕರಾದ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಸೈನಿಕ ಪ್ರಕೋಷ್ಟದ ಸಹ ಸಂಚಾಲಕರಾದ ನರೇಶ್ ಪೈ, ಪ್ರಮುಖರಾದ ರಮೇಶ ಕಂಡೆಟ್ಟು, ಸಂಜಯ ಪ್ರಭು, ನಿತಿನ್ ಕುಮಾರ್ , ಜಯಾನಂದ ಅಂಚನ್, ಮಾಜಿ ಸೈನಿಕರಾದ ಎಸ್.ಕೆ. ಶೆಟ್ಟಿ, ಮತ್ತಿತರರು ಭಾಗವಹಿಸಿದ್ದರು. ಪ್ರಸನ್ನ ದರ್ಬೆ ಕಾರ್ಯ ಕ್ರಮ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









