ಮಂಗಳೂರು : ಶಿಲ್ಪಾ ಕಲರ್ ಲ್ಯಾಬ್ ಮಾಲಕ, ಮಾಜಿ ಮೂಡಾ ಅಧ್ಯಕ್ಷ ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ, ದಿ ಕರಾವಳಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಸ್ಥಾಪನೆಗೆ ಕಾರಣಕರ್ತರಾದ ಸಮಾಜ ಸೇವಕ ಎಸ್.ರಮೇಶ್ ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ನಿಧನರಾದರು.
ಇವರು ದ.ಕ. ಜಿಲ್ಲಾ ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದರು.ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ರಾಗಿ ದೇವಾಸ್ಥಾನದ ಸರ್ವಾಂಗೀಣ ಅಭಿವೃದ್ಧಿ ಮಾಡಿ ವಿಜೃಂಭಣೆಯ ಬ್ರಹ್ಮ ಕಲಶ ಉತ್ಸವ ಮಾಡಿ ದಾಖಲೆ ಸೃಷ್ಟಿಸಿದ್ದರು. ದಿ ಕರಾವಳಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಸ್ಥಾಪನೆಗೆ ಕಾರಣಕರ್ತರಾದ ಇವರು ಅದರ ನಿರ್ದೇಶಕರಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದರು. ಗಾಣಿಗ ಸಮಾಜದ ಇನ್ನೊಂದು ಹಣಕಾಸು ಸಂಸ್ಥೆಯಾದ ಸಫಲ ಸೌಹಾರ್ದ ಸಹಕಾರಿ ಸಂಘ ಇದರ ಸ್ಥಾಪನೆಗೆ ಕಾರಣಕರ್ತರಾದ ಇವರು, ದಕ್ಷಿಣ ಕನ್ನಡ ಜಿಲ್ಲಾ ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷರಾಗಿ ರಾಜಕೀಯ ರಂಗದಲ್ಲೂ ಪಕ್ಷ ಸಂಘಟನೆಗೆ ಶ್ರಮಿಸಿದ್ದರು.
ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಾ ಅಧ್ಯಕ್ಷರಾಗಿ ಬಡ ಜನರ ಕಷ್ಟಗಳಿಗೆ ಸ್ಪಂದಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿಗೆ ಶಿಲ್ಪಾ ಕಲರ್ ಲ್ಯಾಬ್ ಸ್ಥಾಪಿಸಿ ಕಲರ್ ಲ್ಯಾಬ್ ಇತಿಹಾಸದಲ್ಲಿ ಜನಪ್ರಿಯತೆ ಪಡೆದ ಇವರು ತಮ್ಮ ಕಲರ್ ಲ್ಯಾಬ್ ನ ಶಾಖೆಗಳನ್ನು ಶಿವಮೊಗ್ಗ, ಉಡುಪಿ, ಕೇರಳದ ಕಣ್ಣೂರು ಅಲ್ಲದೆ ವಿವಿಧ ಕಡೆ 7 ಶಾಖೆಗಳನ್ನು ಸ್ಥಾಪಿಸಿ ಕಲರ್ ಲ್ಯಾಬ್ ಕ್ಷೇತ್ರದಲ್ಲಿ ಜನಪ್ರಿಯತೆಯ ಉತ್ತುಂಗ ಶಿಖರ ಏರಿದ್ದರು. ಸಮಾಜದಲ್ಲಿ ಸಂಘಟನೆ, ದೈವ ಭಕ್ತಿ, ದಾರ್ಮಿಕ ಪ್ರವೃತ್ತಿಯನ್ನು ಎತ್ತರಿಸದ ಇವರು ಸರಳ ಸಜ್ಜನ ವ್ಯಕ್ತಿತ್ವದವರು,ಕೊಡುಗೈ ದಾನಿಗಳು ಆಗಿದ್ದರು.ಒಬ್ಬ ವ್ಯಕ್ತಿ ಎಷ್ಟು ಕಾಲ ಬದುಕಿದ್ದಾನೆ ಎಂಬುದು ಮುಖ್ಯವಲ್ಲ. ಅವರು ಸಮಾಜಕ್ಕೆ ಏನು ನೀಡಿದ್ದಾರೆ ಎಂಬುದೇ ಮುಖ್ಯ.ಎಸ್ ರಮೇಶ್ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ.
ಅವರ ಅಂತ್ಯಕ್ರಿಯೆ ನಾಳೆ ದಿನಾಂಕ 10.08.2025ಕ್ಕೆ ಆದಿತ್ಯವಾರ ಬೆಳಿಗ್ಗೆ 10.30.ಯಿಂದ 11 ಗಂಟೆ ಒಳಗೆ ಉರ್ವಾ ಸ್ಟೋರ್ ಬಳಿಯ ಡೈಮಂಡ್ ಕ್ರೆಸ್ಟ್ ಪ್ಲಾಟಿನ ಮೊದಲ ಮಹಡಿಯ ಮನೆಯಲ್ಲಿ ಜರಗಲಿದೆ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









