ಮಂಗಳೂರು : ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ ಇಂಟಾಕ್ ನ ಮಂಗಳೂರು ವಿಭಾಗವು “ಆಲ್ಬಮ್ ಆಫ್ ದಿ ಪೋರ್ಚಸ್” ಎಂಬ ಶೀರ್ಷಿಕೆಯಡಿಯಲ್ಲಿ ಸಾಂಪ್ರದಾಯಿಕ ಮಂಗಳೂರು ಕ್ಯಾಥೋಲಿಕ್ ಮನೆಗಳನ್ನು ದಾಖಲಿಸುವ ಒಂದು ವಾರದ ಛಾಯಾಚಿತ್ರ ಪ್ರದರ್ಶನವನ್ನು ಪ್ರಸ್ತುತಪಡಿಸಲಿದೆ. ಈ ಪ್ರದರ್ಶನವು ಶನಿವಾರ, ಅಕ್ಟೋಬರ್ 04, 2025 ರಂದು ಸಂಜೆ 5:30ಕ್ಕೆ ನಗರದ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ದಕ್ಷಿಣ ಕನ್ನಡ ಕ್ಯಾಥೋಲಿಕ್ ಸಂಘ (ಸಿಎಎಸ್ಕೆ) ಅಧ್ಯಕ್ಷ ರೊನಾಲ್ಡ್ ಗೋಮ್ಸ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಪ್ರದರ್ಶನವು ಅಕ್ಟೋಬರ್ 11ರವರೆಗೆ, ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ಮಂಗಳೂರು ತನ್ನ ಸಾಂಪ್ರದಾಯಿಕ ಮಂಗಳೂರು ಕ್ಯಾಥೋಲಿಕ್ ಮನೆಗಳಿಗಾಗಿ ಪ್ರಸಿದ್ಧ, ಇವು ಐರೋಪ್ಯ ಮತ್ತು ಸ್ಥಳೀಯ ಶೈಲಿಗಳನ್ನು ಹೊಂದಿದ್ದು, ದಕ್ಷಿಣ ಭಾರತದ ಪರಿಸರಕ್ಕೆ ಹೊಂದಿಕೊAಡಿವೆ. ಅವುಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು ಮುಂಬಾಗಿಲಿನ ಮಂಟಪ (ವರಾಂಡಾ), ದೈನಂದಿನ ಪ್ರಾರ್ಥನೆಗೆ ಪೂಜಾಸ್ಥಳ ಮತ್ತು ಸಾಂಪ್ರದಾಯಿಕ ಮಂಗಳೂರು ಹೆಂಚಿನ ಛಾವಣಿಯು ಹಲವು ತಲೆಮಾರುಗಳ ಕುಟುಂಬ ಸ್ಮರಣೆಯನ್ನು ಕಾಪಾಡುತ್ತಿತ್ತು. ಇಂಟಾಕ್ನ ಈ ಯೋಜನೆಯು ನಗರದಾದ್ಯಂತ 27 ಅಂತಹ ಮನೆಗಳನ್ನು ದಾಖಲಿಸಿದೆ, ಅವುಗಳ ವಾಸ್ತುಶಿಲ್ಪ, ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಂಗ್ರಹಿಸಿದೆ.
ಯೋಜನೆ ಇಂಟಾಕ್ನ ಮಂಗಳೂರು ವಿಭಾಗ ಸಂಚಾಲಕ ಮತ್ತು ವಾಸ್ತುಶಿಲ್ಪಿ ಸುಭಾಸ್ ಬಸು ನೇತೃತ್ವದಲ್ಲಿ ಛಾಯಾಗ್ರಾಹಕ ಮುರಳಿ ಅಬ್ಬೆಮನೆ ಮತ್ತು ಸಂಶೋಧಕಿ ಶರ್ವಾಣಿ ಭಟ್ ಅವರ ಸಹಕಾರದೊಂದಿಗೆ ನಡೆಯಿತು. ಹ್ಯಾರಿಯಟ್ ವಿದ್ಯಾಸಾಗರ್, ಡಾ. ಮೈಕೆಲ್ ಲೋಬೊ, ನಯನಾ ಫೆರ್ನಾಂಡಸ್ ಮತ್ತು ವಿನ್ಸೆಂಟ್ ಡಿ’ಸೋಜಾ ಅವರು ಮನೆಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಕುರಿತು ಅಮೂಲ್ಯ ಮಾಹಿತಿಗಳನ್ನು ಒದಗಿಸಿದರು.
ದಾಖಲಿಸಲಾದ ಗಮನಾರ್ಹ ಮನೆಗಳಲ್ಲಿ ಫಾದರ್ ಮಲ್ಲರ್ ಆಸ್ಪತ್ರೆಗೆ ಪ್ರಮುಖ ಕೊಡುಗೆ ನೀಡಿದ ಡಾ. ಲಾರೆನ್ಸ್ ಫೆರ್ನಾಂಡಿಸ್ಗೆ ಸಂಬAಧಿಸಿದ ಫರ್ನ್ಡೇಲ್ ಮನೆ; ಡಾ. ಡೆರೆಕ್ ಮತ್ತು ಶ್ರೀಮತಿ ಪ್ಯಾಟ್ಸಿ ಲೋಬೊ ಹಾಗು ಅವರ ಕುಟುಂಬ ವಂಶಾವಳಿಗೆ ಸಂಬAಧಿಸಿದ ನಂದಿಗುಡ್ಡ ಮನೆ; ಮತ್ತು ಸಂಶೋಧಕ, ವಂಶಾವಳಿಶಾಸ್ತçಜ್ಞ ಡಾ. ಮೈಕೆಲ್ ಲೋಬೊ ಅವರ ಕುಟುಂಬದ ಮನೆ ಕ್ಯಾಮೆಲಾಟ್ ಸೇರಿವೆ, ಪ್ರತಿಯೊಂದೂ ವೈಯಕ್ತಿಕ ಮತ್ತು ಐತಿಹಾಸಿಕ ನಿರೂಪಣೆಗಳನ್ನು ಹೊಂದಿದೆ. ಕೆಲವು ಮನೆಗಳ ಒಳವಿನ್ಯಾಸ ಹಾಗು ಹೊರವಿನ್ಯಾಸ ಎರಡನ್ನೂ ಛಾಯಾಚಿತ್ರ ಮಾಡಲಾಗಿದೆ, ಆದರೆ ಇತರವುಗಳನ್ನು ಪ್ರವೇಶ ಮಿತಿಗಳಿಂದಾಗಿ ಬಾಹ್ಯವಾಗಿ ದಾಖಲಿಸಲಾಗಿದೆ. ಕ್ಯಾಥೋಲಿಕ್ ಪರಂಪರೆಯ ಅಮೂಲ್ಯ ಅಂಗವಾಗಿರುವ ಈ ಕಟ್ಟಡಗಳಲ್ಲಿ ಹಲವಾರು ಮನೆಗಳು ಇನ್ನೂ ಬಳಕೆಯಲ್ಲಿವೆ, ಕೆಲವು ಖಾಲಿಯಾಗಿದ್ದು ಮತ್ತು ಕೆಲವು ಮಾರಾಟವಾಗಿವೆ ಅಥವಾ ಕೆಡವಲ್ಪಟ್ಟಿವೆ.
ಈ ಪ್ರದರ್ಶನವು ಬ್ರಿಟಿಷ್ ಕಾಲದ ವಾಸ್ತುಶಿಲ್ಪದಿಂದ ಪ್ರಭಾವಿತವಾದ ಇತರ ಕ್ರೆöÊಸ್ತ ಪರಂಪರೆಯ ಮನೆಗಳನ್ನೂ ಒಳಗೊಂಡAತೆ ಈ ಮನೆಗಳ ಕಥೆಗಳು ಮತ್ತು ವಾಸ್ತುಶಿಲ್ಪವನ್ನು ಸೆರೆಹಿಡಿಯುತ್ತದೆ. ಭವಿಷ್ಯದ ಪೀಳಿಗೆಗಳಿಗೆ ಈ ಪರಂಪರೆಯನ್ನು ಸಂರಕ್ಷಿಸಲು ಇದನ್ನು ಆಲ್ಬಮ್-ಪುಸ್ತಕ ರೂಪದಲ್ಲಿ ಪ್ರಕಟಿಸಲು ಯೋಜಿಸಲಾಗಿದೆ. ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರ ಪರಿಸರದಲ್ಲಿ ಈ ಇತಿಹಾಸದ ಬಹುಭಾಗವನ್ನು ಅಳಿಸಿಹಾಕುವ ಆತಂಕದ ಮಧ್ಯೆ, ಈ ಯೋಜನೆಯು ದಾಖಲೀಕರಣ ಮತ್ತು ಸಂರಕ್ಷಣೆಯ ಮೂಲಕ ಪರಂಪರೆಯನ್ನು ಉಳಿಸುತ್ತದೆ.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ವಿಶೇಷ ಸುದ್ದಿಗಳು, ಸುದ್ದಿಗಳು