ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಂಜೆ ಮಂಗೇಶರಾಯರು ಹಾಗೂ ಕೃತಿಗಳ ಅವಲೋಕನ ಎಂಬ ಕಾರ್ಯಕ್ರಮ ಇತ್ತೀಚೆಗೆ ಪರಿಷತ್ತಿನ ಕಾರ್ಯಕಾರೀ ಸದಸ್ಯೆ ಡಾ ಅರುಣಾ ನಾಗರಾಜ್ ರವರ ಮನೆ ಮಂಗಳೂರಿನ ಉರ್ವ ಮಾರ್ಕೆಟ್ ಬಳಿಯ ಶ್ರೀ ಸಿದ್ಧಿವಿನಾಯಕ ಕೃಪಾ ದಲ್ಲಿ ನಡೆಯಿತು.
ವಿಶ್ರಾಂತ ಪ್ರಾಧ್ಯಾಪಕ ಡಾ ವರದರಾಜ್ ಚಂದ್ರಗಿರಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕನ್ನಡ ಸಾಹಿತ್ಯಕ್ಕ ಪಂಜೆಯವರ ಅಮೂಲ್ಯ ಕೊಡುಗೆಯನ್ನು ವಿಸ್ತಾರವಾಗಿ ಪ್ರತಿಪಾದಿಸಿದರು. ಬಹುಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ ತನ್ನ ಸೌಗಂಧವನ್ನು ಬೀರಲು ಪಂಜೆ ಮಂಗೇಶರಾಯರು ಮಂಜೇಶ್ವರ ಗೋವಿಂದ ಪೈ ಹಾಗೂ ಮುಳಿಯ ತಿಮ್ಮಪ್ಪಯ್ಯನವರು ಮೂಲ ಕಾರಣ ಎಂದು ಶ್ಲಾಘಿಸಿದರು ಅವರು ಬರೆದ ಮಕ್ಕಳ ಪದ್ಯಗಳು ಶಾಲಾ ಪಠ್ಯ ಪುಸ್ತಕಗಳಲ್ಲಿ ಇಂದಿಗೂ ಜನಮನದಲ್ಲಿ ಗಟ್ಟಿಯಾಗಿ ಉಳಿದಿದೆ ಎಂದರು.
ಪೊಂಪೈಶಾಲೆಯ ನಿವೃತ್ತ ಶಿಕ್ಷಕಿ ಸಾಮಾಜಿಕ ಚಿಂತಕಿ ಕೆ. ಎ. ರೋಹಿಣಿ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಉಳಿಸುವ ಹಾಗೂ ಬೆಳೆಸುವ ಕಾರ್ಯ ಮನೆಯಂಗಳದಿಂದಲೇ ಪ್ರಾರಂಭವಾಗಬೇಕು ಎಂದರು. ಈ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಇಂತಹ ಕಾರ್ಯಕ್ರಮಗಳು ಮಹತ್ವ ಪೂರ್ಣವಾಗಿದೆ ಎಂದರು.
ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಎಂ.ಪಿ. ಶ್ರೀನಾಥ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮನೆಯಂಗಳದಲ್ಲಿ ಸಾಹಿತ್ಯ ಎಂಬ ಕಾರ್ಯಕ್ರಮದ ಇಂದಿನ ಅವಶ್ಯಕತೆಯನ್ನು ತಿಳಿಸಿದರು ಹಾಗೂ ಪಂಜೆಯವರ ಸಾಹಿತ್ಯ ಪ್ರೇಮವನ್ನು ಪ್ರಶಂಸಿಸಿದರು.
ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ಡಾ ವಸಂತ ಕುಮಾರ್ ಪೆರ್ಲ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಅಮೃತ ಪ್ರಕಾಶ ಮಾಸಪತ್ರಿಕೆ ಸಂಪಾದಕಿ ಡಾ. ಮಾಲತಿಶೆಟ್ಟ ಮಾಣೂರು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕಿನ ಅಧ್ಯಕ್ಷ ರಾದ ಡಾ. ಮಂಜುನಾಥ್ ರೇವಣ್ಕರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧೀಕ್ಷಕ ಕೆ. ಎನ್. ನಾಗರಾಜ್ ಶೇಟ್, ಇಂಜಿನಿಯರ್ ಮಂಜುನಾಥ್ ಶೇಟ್ ಸಹಕರಿಸಿದರು.
ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಯವರು ಆಶಯ ಗೀತೆ ಹಾಡಿದರು.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ವಿಷಯದಲ್ಲಿ ಕವಯಿತ್ರಿಯರಾದ ಸುಧಾ ನಾಗೇಶ್ ನಳಿನೀ ಪೈ ವಿದ್ಯಾಗಣೇಶ್, ಆಕೃತಿ ಐ.ಎಸ್. ಭಟ್ ಹಾಗೂ ಶ್ರೀ ಸುಬ್ರಾಯ ಭಟ್ ಮುಂತಾದ ಕವಿಗಳು ಸ್ವರಚಿತ ಕವನ ವಾಚಿಸಿದರು. ಹಿರಿಯ ಕವಯಿತ್ರಿ ಶ್ರೀಮತಿ ಸತ್ಯವತಿ ಭಟ್ ಕೊಳಚಪ್ಪು ಗೋಷ್ಠಿ ಯ ಅಧ್ಯಕ್ಷತೆ ವಹಿಸಿ ತನ್ನ ಸ್ವರಚಿತ ಕವನವನ್ನು ವಾಚಿಸಿದರು.
ಡಾ ಅರುಣಾ ನಾಗರಾಜ್ ಸ್ವಾಗತಿಸಿ ನಿರೂಪಿಸಿದರು. ಇಂಜಿನಿಯರ್ ಶ್ರೀಮತಿ ಸಿಂಧೂ ಮಂಜುನಾಥ್ ವಂದಿಸಿದರು.
ಇದೇ ಸಂದರ್ಭ ಕ. ಸಾ. ಪ. ಸಂಘಟನಾ ಕಾರ್ಯದರ್ಶಿ ಖಾಲಿದ್ ಉಜಿರೆ ಕನ್ನಡ ಗೀತೆಯನ್ನು ಹಾಡಿದರು
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









