ಮಂಗಳೂರು: ‘ಜೀವಿತಾವಧಿಯ ಭರವಸೆ’ ಎಂಬ ಧ್ಯೇಯದೊಂದಿಗೆ ಕೇರಳ ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರಸಿದ್ಧ ಬಿಂದು ಜುವೆಲ್ಲರಿ, ಅಕ್ಟೋಬರ್ 19, ಗುರುವಾರ ನಗರದ ಎಸ್ಸಿಎಸ್ ಆಸ್ಪತ್ರೆ ಬಳಿ ತನ್ನ ಹೊಸ ಶಾಖೆಯನ್ನು (ಕರ್ನಾಟಕದಲ್ಲಿ 2ನೇ ಶಾಖೆ) ಅಧಿಕೃತವಾಗಿ ಉದ್ಘಾಟಿಸಲಿದೆ.
ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿರುವ ಈ ನೂತನ ಮಳಿಗೆಯಲ್ಲಿ ವಜ್ರದ ಆಭರಣಗಳು ಹಾಗೂ ಕಡಿಮೆ ತೂಕದ ಚಿನ್ನಾಭರಣಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಸಂಸ್ಥೆಯ ಮಾಲಕ ಅಭಿಲಾಷ್ ಕೆ.ವಿ. ತಿಳಿಸಿದ್ದಾರೆ.
40 ವರ್ಷಗಳ ವಿಶ್ವಾಸಾರ್ಹತೆ: 1982ರಲ್ಲಿ ಕೆ.ವಿ. ಕುಂಞಿಕನ್ನನ್ ಅವರಿಂದ ಆರಂಭಗೊಂಡ ಬಿಂದು ಜುವೆಲ್ಲರಿ, ಕಳೆದ ನಾಲ್ಕು ದಶಕಗಳಿಂದ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಚಿನ್ನದ ಪರಿಶುದ್ಧತೆಗೆ ಬದ್ಧವಾಗಿರುವ ಈ ಸಂಸ್ಥೆಯ ಪಯಣವನ್ನು ಇದೀಗ ಮಾಲಕರಾದ ಅಭಿಲಾಷ್ ಕೆ.ವಿ. ಮತ್ತು ಡಾ. ಅಜಿತೇಶ್ ಕೆ.ವಿ. ಮುಂದುವರಿಸುತ್ತಿದ್ದಾರೆ.
ಗ್ರಾಹಕರಿಗಾಗಿ ಉಳಿತಾಯ ಯೋಜನೆಗಳು: ಹೊಸ ಶಾಖೆಯಲ್ಲಿಯೂ ಗ್ರಾಹಕರಿಗಾಗಿ ಜನಪ್ರಿಯ ಮಾಸಿಕ ಉಳಿತಾಯ ಯೋಜನೆಗಳಾದ ‘ಅಕ್ಷಯ ನಿಧಿ’ ಮತ್ತು ‘ಸ್ವರ್ಣ ಬಿಂದು’ ಮುಂದುವರಿಯಲಿದ್ದು, ಇದರ ಮೂಲಕ ಗ್ರಾಹಕರು ಬೋನಸ್ ಮತ್ತು ಇತರ ಲಾಭಗಳನ್ನು ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ವಿಶೇಷ ಸುದ್ದಿಗಳು









