ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ” ಕಾರ್ತಿಕ ಏಕಾದಶಿ ” ಪರ್ವ ದಿನದಂದು ಪ್ರಧಾನ ಶ್ರೀ ಶ್ರೀ ಭೂ ಸಹಿತ ವೀರ ವೆಂಕಟೇಶ ದೇವರು ಹಾಗೂ ಉತ್ಸವ ಶ್ರೀನಿವಾಸ ದೇವರಿಗೆ ಗಂಗಾಭಿಷೇಕ , ಬ್ರಹ್ಮಕಲಶಾಭಿಷೇಕ ಇಂದು ಸಾಯಂಕಾಲ ಶ್ರೀ ದೇವಳದಲ್ಲಿ ನೆರವೇರಿತು . ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಕೆ . ಗಣೇಶ್ ಕಾಮತ್ , ಜಗನ್ನಾಥ್ ಕಾಮತ , ದೇವಳದ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ , ಪ್ರಧಾನ ಅರ್ಚಕರಾದ ಕೆ ಚಂದ್ರಕಾಂತ್ ಭಟ್ , ಹರೀಶ್ ಭಟ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









