ಮಂಗಳೂರು : ಸುರತ್ಕಲ್ ಮೂಲದ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಇದು ‘ಲವ್ ಜಿಹಾದ್’ ಎಂದು ಯುವತಿಯ ತಂದೆ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗಳು ವೈಶಾಲಿ ವ್ಯವಸ್ಥಿತ ಸಂಚಿಗೆ ಬಲಿಯಾಗಿದ್ದಾಳೆ ಎಂದು ದೂರಿದ ಅವರು, ಈ ಸಂಪೂರ್ಣ ಪ್ರಕರಣದ ಹಿಂದೆ SDPI ಸಂಘಟನೆಯ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾಗಿರುವ ಯುವಕ ಮೊಹಮ್ಮದ್ ಮಿದ್ಲಾಜ್ ಈ ಹಿಂದೆ SDPI ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಈ ಕೃತ್ಯದಲ್ಲಿ ಸಂಘಟಿತ ಪ್ರಚೋದನೆ ಇರುವುದನ್ನು ಸಂಶಯಿಸಿರುವ ಕುಟುಂಬಸ್ಥರು, ಮಿದ್ಲಾಜ್ ಕೆಲಸ ಮಾಡುತ್ತಿದ್ದ ಅಟ್ಲಾಂಟಿಕ್ ಜುವೆಲ್ಲರ್ಸ್ನ ಮಾಲೀಕರು ಕೂಡ SDPI ಮುಖಂಡರಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಯುವಕನ ಪರವಾಗಿ ಕೇರಳದ ವಯನಾಡು ಪೊಲೀಸ್ ಠಾಣೆಗೆ ಆಗಮಿಸಿದ ವ್ಯಕ್ತಿಗಳು ಅದೇ ಸಂಘಟನೆಗೆ ಸೇರಿದವರಾಗಿದ್ದರು ಎಂಬುದು ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಮಗಳು ಯಾವುದಾದರೂ ಮಾದಕ ವ್ಯಸನಕ್ಕೆ ಬಲಿಯಾಗಿದ್ದಾಳೆಯೇ ಅಥವಾ ಬ್ರೈನ್ ವಾಶ್ ಮಾಡಲಾಗಿದೆಯೇ ಎಂಬ ಆತಂಕ ತಂದೆಯನ್ನು ಕಾಡುತ್ತಿದೆ.
ತನ್ನ ಮಗಳು ಸುರಕ್ಷಿತವಾಗಿ ಮನೆಗೆ ಮರಳಬೇಕು ಎಂಬುದು ಪೋಷಕರ ಏಕೈಕ ಆಶಯವಾಗಿದ್ದು, ಪ್ರಕರಣದ ಬಗ್ಗೆ ಸಮಗ್ರ ಪೊಲೀಸ್ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಶಂಕಾಸ್ಪದ ಕೃತ್ಯಗಳ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಆಳವಾದ ಪರಿಶೀಲನೆ ನಡೆಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









