ಬೆಂಗಳೂರು : ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಇತ್ತೀಚಿನ ಆರೋಪಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ಬಳಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಮ್ಮ ಅನುಭವದ ಲೆಕ್ಕಾಚಾರದ ಮೇಲೆ ಇಂತಹ ಮಾತುಗಳನ್ನು ಆಡುತ್ತಿರಬಹುದು, ಅವರಲ್ಲಿ ಏನೋ ಸಮಸ್ಯೆಯಿದೆ ಎಂದು ಲೇವಡಿ ಮಾಡಿದರು.
ಸಚಿವ ಸುಧಾಕರ್ ಅವರ ಆರೋಗ್ಯದ ವಿಚಾರವನ್ನು ಮುಚ್ಚಿಟ್ಟು ಅವರ ಹೆಬ್ಬೆಟ್ಟು ಒತ್ತಿಸಿಕೊಳ್ಳಲಾಗಿದೆ ಎಂಬ ಕುಮಾರಸ್ವಾಮಿ ಅವರ ಗಂಭೀರ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಯಾವ ಹೆಬ್ಬೆಟ್ಟು, ಏನು ಎಂಬುದು ಕುಮಾರಸ್ವಾಮಿ ಅವರಿಗೇ ಗೊತ್ತಿರಬೇಕು. ಇಂತಹ ವಿಷಯಗಳನ್ನು ಅವರು ಸುಧಾಕರ್ ಅವರ ಕುಟುಂಬದವರ ಬಳಿ ಹೇಳಬೇಕು ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಡಿಸಿಎಂ, ಇಂತಹ ಮಾತುಗಳಿಂದ ಅವರ ಘನತೆಗೆ ಮತ್ತು ಹಿರಿತನಕ್ಕೆ ಯಾವುದೇ ಗೌರವ ಬರುವುದಿಲ್ಲ ಎಂದು ಹರಿಹಾಯ್ದರು. ರಾಜಕೀಯ ಕೆಸರೆರಚಾಟದ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಆರೋಪಗಳು ಆಧಾರರಹಿತ ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜಕೀಯ, ಟಾಪ್ ಸುದ್ದಿ, ರಾಜ್ಯ ಸುದ್ದಿಗಳು, ಸುದ್ದಿಗಳು









